ಬೆಂಗಳೂರು: ನಟ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಬೆಂಗಳೂರಿನ ಜಯನಗರ ಬಿಎಂಟಿಸಿ ಬಸ್ ಡಿಪೋಗೆ ದಿಢೀರ್ ಭೇಟಿ ಕೊಟ್ಟು ಹಳೆಯ ದಿನಗಳನ್ನ ಮೆಲುಕು ಹಾಕಿದರು.
ತಾವು ಕೆಲಸ ಮಾಡಿದ್ದ ಜಯನಗರದ ಡಿಪೋಗೆ ಭೇಟಿ ನೀಡಿದ ತಲೈವಾ . ಸಿಬ್ಬಂದಿಗಳ ಜೊತೆ ಸ್ವಲ್ಪ ಹೊತ್ತು ಕಾಲ ಕಳೆದರು. ರಜನಿಕಾಂತ್ ದಿಢೀರ್ ಭೇಟಿ ಕಂಡು ಅಚ್ಚರಿ ಪಟ್ಟ ಬಿಎಂಟಿಸಿ ಸಿಬ್ಬಂದಿಗಳು ತಲೈವಾ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು.