ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಆ. 31. ಸಾಹಿತ್ಯ ಗ್ರಾಮದಲ್ಲಿ ಸಾಹಿತ್ಯ ಹುಣ್ಣಿಮೆ ಶ್ರಾವಣ ಸಂಭ್ರಮ

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಶ್ರೀ ಬೆಕ್ಕಿನಕಲ್ಮಠದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನಮಠ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದಲ್ಲಿ ಶ್ರಾವಣ ಚಿಂತನ ಕಾರ್ಯಕ್ರಮ ಹಾಗೂ 216 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ಆಗಸ್ಟ್ 31 ರಂದು ಗುರುವಾರ ಸಂಜೆ 06:00 ಕ್ಕೆ ನಗರದ ಗೋಪಿಶೆಟ್ಟಿಕೊಪ್ಪ ಬಡಾವಣೆಯ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಚ್. ವಿ. ಶಿವಾನಂದ ಶೇಟ್ ಅವರು ಬರೆದ ಎರಡು ಕೃತಿಗಳ ಲೋಕಾರ್ಪಣೆ, ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ಎಲ್. ಭೋಜೇಗೌಡರು ಸಾಹಿತ್ಯ ಗ್ರಾಮದ ಬಳಕೆಗೆ ನೀಡಿರುವ ಪೀಠೋಪಕರಣಗಳ ಸಮರ್ಪಣೆ ಕಾರ್ಯಗಳು ನಡೆಯಲಿವೆ.  ಶ್ರೀ ಬೆಕ್ಕಿನಕಲ್ಮಠದ ಶ್ರೀ ಶ್ರೀ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯ ವಹಿಸಲಿದ್ದು, ವಿಧಾನ ಪರಿಷತ್ತು ಸದಸ್ಯರಾದ ಎಸ್. ಎಲ್. ಭೋಜೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಲಕ್ಷ್ಮೀ ಶಂಕರನಾಯ್ಕ ಭಾಗವಹಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಕ್ರಿಯಾಶೀಲ ಸದಸ್ಯರಾಗಿ ಎಚ್. ವಿ. ಶಿವಾನಂದ ಶೇಟ್ ಅವರು ಉತ್ತಮ ಕವಿತೆಗಳ ರಚನಕಾರರಾಗಿ ಅವರು ಬರೆದ ಕವನಗಳು ಸಿ.ಡಿ., ಕ್ಯಾಸೆಟ್ ಗಳಾಗಿದ್ದವು. ಶಿವಮೊಗ್ಗದ ಹೆಮ್ಮೆಯ ಕವಿಯಾಗಿದ್ದ ಅವರು ಕರೋನ ಮಹಾಮಾರಿಯ ಅಟ್ಟಹಾಸಕ್ಕೆ ಅಕಾಲಿಕ ಮರಣಕ್ಕೆ ಒಳಗಾದರು. ಅವರು ಬರೆದ ನೂರಾರು ಕವನಗಳಲ್ಲಿ ಕೆಲವನ್ನು ಆಯ್ಕೆಮಾಡಿ ಎರಡು ಕೃತಿಗಳನ್ನು ಅವರ ಕುಟುಂಬ ಪ್ರಕಟಿಸಿದೆ. ಆ ಎರಡು ಕೃತಿಗಳ ಲೋಕಾರ್ಪಣೆ ಇದೇ ವೇದಿಕೆಯಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ ಆರ್ ಅವರು ಕನ್ನಡ ಭಕ್ತಿಗೀತೆಗಳು ಕೃತಿಯನ್ನು, ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣಗೌಡರು ಕನ್ನಡ ಭಾವಗೀತೆಗಳು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ದೈವಜ್ಙ ಬ್ರಾಹ್ಮಣ ಸಮಾಜದ ಮಾಜಿ ಅಧ್ಯಕ್ಷರಾದ ಕಮಲಾಕ್ಷ ಎಸ್. ಡಿ., ಸಾಹಿತ್ಯ ಹುಣ್ಣಿಮೆಯ ಹಿಂದಿನ ಆತಿಥ್ಯ ನೀಡಿದ್ದ ಗೋಪಾಲಗೌಡ ಬಡಾವಣೆಯ ಎ ಬ್ಲಾಕ್ ನಿವಾಸಿಗಳ ಸಂಘದ ಅಧ್ಯಕ್ಷರಾದ ರಾಮಚಂದ್ರ ಎಸ್. ಸಿ., ಗೌರವಾಧ್ಯಕ್ಷರಾದ ಆದಿಮೂರ್ತಿ ಎಚ್. ಬಿ. ಅವರು ಭಾಗವಹಿಸಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ನಾಲ್ಕು ಜನ ಗಣ್ಯರನ್ನು ಅಭಿನಂದಿಸುತ್ತಿದ್ದು, ತೀರ್ಥಹಳ್ಳಿಯ ಶಿಕ್ಷಕರ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ, ಹಿರಿಯ ತೆರಿಗೆ ಸಲಹೆಗಾರರು, ನಮ್ಮ ಕೋಶಾಧ್ಯಕ್ಷರಾದ ಯು. ಮಧುಸೂಧನ ಐತಾಳ್, ಶಿಕಾರಿಪುರದ ಗಾಯಕರಾದ ವಿದ್ವಾನ್ ವಿಜಯಲಕ್ಷ್ಮೀ, ಸಮಾಜ ಸೇವಕರಾದ ಡಾ. ಶಾಂತಾ ಸುರೇಂದ್ರ ಅವರನ್ನು ಸನ್ಮಾನಿಸಲಾಗುವುದು.
ಖ್ಯಾತ ಗಾಯಕರಾದ ಕೆ. ಯುವರಾಜ್, ಡಾ. ಶಶಿಕಾಂತ್ ಜೈನ್, ನಾಗರಾಜ್, ಲಕ್ಷ್ಮೀ ಮಹೇಶ್, ಮಹಾದೇವಿ, ನಳಿನಾಕ್ಷಿ, ಸುಶೀಲಾ ಷಣ್ಮುಗಂ, ಬಿ.ಟಿ. ಅಂಬಿಕಾ ಅವರು ಭಾಗವಹಿಸಲಿದ್ದಾರೆ. ವಿದೂಷಿ ಶ್ರೀಮತಿ ಪುಷ್ಪಾ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನೃತ್ಯ ಸಂಯೋಜನೆ ನಡೆದಿದೆ. ಸಾಹಿತಿಗಳಾದ ಡಾ. ಕಲೀಮ್ ಉಲ್ಲಾ ಅವರು ಕಥೆ ಹೇಳುತ್ತಾರೆ. ಕವಿಗಳಾದ ಡಾ. ಗುರುರಾಜ್, ಪ್ರವೀಣ್ ಜವಳಿ, ಕುಪ್ಪೇರಾವ್, ಹನಿಗವನ ವಾಚಿಸಲು ಡಾ. ಹಸೀನಾ, ಗಾಯಿತ್ರಿ ಅವರು ಭಾಗವಹಿಸಲಿದ್ದಾರೆ. ವಾದ್ಯ ಸಹಕಾರದಲ್ಲಿ ಪುಟ್ಟು ಸಾಗರ ಮತ್ತು ತಂಡ ಭಾಗವಹಿಸಲಿದ್ದಾರೆ ಎಂದು ಡಿ. ಮಂಜುನಾಥ ವಿವರಿಸಿದರು.
————————————————————————————–
ಮಾನ್ಯ ಶಾಸಕರ ಅಭಿವೃದ್ಧಿ ನಿಧಿಯಿಂದ ಮಾನ್ಯ ಎಸ್. ಎಲ್. ಭೋಜೇಗೌಡರು ಸಾಹಿತ್ಯ ಗ್ರಾಮದ ಅಗತ್ಯಕ್ಕೆ ಪೀಠೋಪಕರಣ ಪಡೆಯಲು ಮೂರು ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದು ನಿರ್ಮಿತಿ ಕೇಂದ್ರದ ಮೂಲಕ ಸರಬರಾಜು ಆಗಲಿದ್ದು, ಅಂದೇ ಸಮರ್ಪಣೆ ಕಾರ್ಯ ನಡೆಯಲಿದೆ ಎಂದು ಹೇಳಿದರು.
—————————————————————————————-
ಸುದ್ದಿಗೋಷ್ಟಿಯಲ್ಲಿ ಪದಾಧಿಕಾರಿಗಳಾದ ಡಿ.ಗಣೇಶ್‌, ಅನುರಾಧ, ಮಧುಸೂದನ ಐತಾಳ್‌, ಮಂಜಪ್ಪ ಉಪಸ್ಥಿತರಿದ್ದರು.

Related posts

‘ರೈತ’ರಿಗೆ ಗುಡ್ ನ್ಯೂಸ್: ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ‘ಬಗರ್ ಹುಕುಂ’ ಸಮಿತಿ,

ರಾಷ್ಟ್ರ ದ್ರೋಹದ ಕೆಲಸಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ಕೊಡಬಾರದು-ಶಾಸಕ ಎಸ್.ಎನ್. ಚನ್ನಬಸಪ್ಪ

ಜನಪದದ ಮೂಲ ಸ್ವರೂಪವನ್ನು ಅರ್ಥೈಸಿಕೊಳ್ಳಿ : ಡಿ.ಮಂಜುನಾಥ