ರಾಮನಗರ,: ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕಿಯನ್ನ ಇನ್ನೋವಾ ಕಾರಿನಲ್ಲಿ ಬಂದು ಅಪಹರಿಸಿ ಹೋಗುತ್ತಿದ್ದ ಯುವಕನನ್ನು ಪೊಲೀಸರು ಸಿನಿಮೀಯ ರೀತಿ ಚೇಸ್ ಮಾಡಿ ಬಂಧಿಸಿದ್ದಾರೆ.
ರಾಮನಗರದ ಜ್ಯೂನಿಯರ್ ಕಾಲೇಜು ಬಳಿ ಸಂಜನಾ ಎಂಬ ಅಪ್ರಾಪ್ತ ಬಾಲಕಿಗೆ ಚಾಕುವಿನಿಂದ ಇರಿದು ಅಪಹರಿಸಿದ್ದರು. ಈ ವೇಳೆ ಸ್ಥಳೀಯರು ಕಲ್ಲಿನಿಂದ ಹೊಡೆದರೂ ಕಲ್ಲೇಟಿಗೂ ಬಗ್ಗೆದೇ ಅಪ್ರಾಪ್ತೆಯನ್ನ ಅಪಹರಿಸಿದ್ದರು.
ಈ ನಡುವೆ ಪೊಲೀಸರು ಇನ್ನೋವಾ ಕಾರನ್ನ ಚೇಸ್ ಮಾಡಿ ಯುವಕನನ್ನು ಬಂಧಿಸಲಾಗಿದೆ. ಸಂಜನಾಳನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.