ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಕನ್ನಡಿಗರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದವರು ಡಾ. ನಾ.ಸು. ಹರ್ಡೀಕರ್- ವೈ.ಹೆಚ್. ನಾಗರಾಜ್

ಶಿವಮೊಗ್ಗ: ಕನ್ನಡಿಗರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದವರು ಡಾ. ನಾ.ಸು. ಹರ್ಡೀಕರ್ ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್. ನಾಗರಾಜ್ ಹೇಳಿದರು.
ಅವರು ಇಂದು ವಿನೋಬನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ ಸೇವಾದಳದ ಜಿಲ್ಲಾ ಮತ್ತು ತಾಲೂಕು ಸಮಿತಿ, ಶಾಲಾ ಶಿಕ್ಷಣ ಇಲಾಖೆ, ಸರ್ಕಾರಿ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ನಾ.ಸು.ಹರ್ಡೀಕರ್ ಅವರ 48ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹರ್ಡೀಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಾ.ಸು ಹರ್ಡೀಕರ್ ಅವರು 1923ರಲ್ಲಿಯೇ ಭಾರತ ಸೇವಾದಳವನ್ನು ಹುಟ್ಟುಹಾಕುವ ಮೂಲಕ ಭಾರತೀಯರಲ್ಲಿ ಸ್ವಾತಂತ್ರ್ಯ ಪ್ರೇಮವನ್ನು ತುಂಬಿದವರು. ಸ್ವಾತಂತ್ರ್ಯಕ್ಕಾಗಿ ಹೊಸ ರೀತಿಯ ಚಳುವಳಿ ರೂಪಿಸಿದವರು. ಮೊಟ್ಟಮೊದಲಿಗೆ ಧ್ವಜದ ಕಲ್ಪನೆಯನ್ನು ಮೂಡಿಸಿದವರೇ ಅವರು. ಅವರು ಕರ್ನಾಟಕದವರು ಎನ್ನುವುದು ನಮ್ಮ ಹೆಮ್ಮೆ. ಜನಸಮುದಾಯದಲ್ಲಿ ಸ್ವದೇಶಿ ಭಾವನೆ ಬೆಳೆಸಿ ಪ್ರೇರಣಾ ಶಕ್ತಿಯಾಗಿದ್ದರು ಎಂದರು.
ಭಾರತ ಸೇವಾದಳದ ಜಿಲ್ಲಾ ಶಾಖೆ ಕೂಡ ಮಕ್ಕಳಲ್ಲಿ ದೇಶಪ್ರೇಮ ತುಂಬುವ, ಸಾಮರಸ್ಯಕಲಿಸುವ ಭಾವನೆ ಬೆಳೆಸಲು ಸರ್ಕಾರಿ ಶಾಲೆಗಳಲ್ಲಿ ತನ್ನ ಶಾಖೆ ತೆರೆಯುತ್ತಿದೆ. ಆ ಮೂಲಕ ಶಿಸ್ತನ್ನು ಮೂಡಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ತಾಲೂಕು ಅಧ್ಯಕ್ಷ ರಮೇಶ್‍ಬಾಬು, ಕಾರ್ಯದರ್ಶಿ ಶರಶ್ಚಂದ್ರ, ಶಿವಮೂರ್ತಪ್ಪ, ಪುಷ್ಟಾವತಿ, ಮಮತಾ ಮುಂತಾದವರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಎಸ್.ಎನ್. ಅಧ್ಯಕ್ಷತೆ ವಹಿಸಿದ್ದರು. ಪ್ರಸನ್ನಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಪರಮೇಶ್ವರಪ್ಪ ನಿರೂಪಿಸಿದರು.

Related posts

ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನಟ ದರ್ಶನ್. ಕಾರಣವೇನು..?

ಪ್ರತಿಷ್ಠಿತ ಕರ್ನಾಟಕ ಸಂಘದ ಪರವಾಗಿ ಅಧ್ಯಕ್ಷ ಎಂ.ಎನ್. ಸುಂದರ ರಾಜ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕಾರ.

ಮೆಡಿಕಲ್ ಕಾಲೇಜು ಸ್ಥಳಾಂತರ ಹಿನ್ನೆಲೆ: ರಾಮನಗರ ಬಂದ್ : ರೈತರು, ವ್ಯಾಪಾರಸ್ಥರಿಂದ ಬೆಂಬಲ.