ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಸಿಎಂ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಬೇಕಾದ್ರೆ ಈ ದಾಖಲೆಗಳ ನೀಡೋದು ಕಡ್ಡಾಯ..

ಬೆಂಗಳೂರು: ಅನಾರೋಗ್ಯ ಪೀಡಿತರು, ವಿವಿಧ ಆರ್ಥಿಕ ದೌರ್ಬಲ್ಯಕ್ಕೆ ಒಳಗಾದವರು, ತೀರ ಸಂಕಷ್ಟದಲ್ಲಿರುವವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿ ಪರಿಹಾರವನ್ನು ಪಡೆಯಬಹುದಾಗಿದ್ದು, ಸಿಎಂ ಪರಿಹಾರ ನಿಧಿಯ ಉಪಯೋಗ ಪಡೆಯಲು ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.

ಅರ್ಜಿದಾರರ ಭಾವ ಚಿತ್ರ (ಪಾಸ್ ಪೋರ್ಟ್ ಆಳತೆ), ಆರ್ಜಿದಾರರ ಬಿ.ಪಿ.ಎಲ್ ಪಡಿತರ ಚೀಟಿ (BIPL Card), ಅರ್ಜಿದಾರರ ಆಧಾರ್ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನ ಸಲ್ಲಿಸಬೇಕಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ಧರಾಮಯ್ಯ,  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ ಮಾನ್ಯ ಸಚಿವರು, ವಿಧಾನ ಸಭಾ, ವಿಧಾನ ಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರುಗಳ ಕಛೇರಿಗಳಿಂದ ಅರ್ಜಿ ಸಲ್ಲಿಕೆಯಾಗುತ್ತಿವೆ. ಆದರೆ ಬಹುತೇಕ ಅರ್ಜಿಗಳು ಸಮರ್ಪಕವಲ್ಲದ ದಾಖಲಾತಿಗಳೊಂದಿಗೆ ಸಲ್ಲಿಕೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ಹೀಗಾಗಿ ಶೀಘ್ರಗತಿಯಲ್ಲಿ ಕಡತ ವಿಲೇವಾರಿ ಮಾಡಲು ತೊಂದರೆಯಾಗುತ್ತಿದ್ದು, ಬಡವರು, ನಿರ್ಗತಿಕರು ಹಾಗೂ ನೊಂದ ಜನರಿಗೆ ಸಕಾಲದಲ್ಲಿ ಪರಿಹಾರ ನೀಡಲು ವಿಳಂಬವಾಗುತ್ತಿರುವುದರಿಂದ, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮುಖ್ಯ ಉದ್ದೇಶ ಈಡೇರಿದಂತಾಗುವುದಿಲ್ಲ. ಆದುದರಿಂದ ತಾವು ಇನ್ನು ಮುಂದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಈ ಕೆಳಕಂಡ ದಾಖಲಾತಿಗಳನ್ನು ಸಲ್ಲಿಸಬೇಕೆಂದು ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ.

ಸಿಎಂ ಪರಿಹಾರ ನಿಧಿಯ ಉಪಯೋಗ ಪಡೆಯಲು ಈ ಕೆಳಕಂಡ ದಾಖಲೆಗಳನ್ನ ಸಲ್ಲಿಸಿ

ಪಾಸ್ ಪೋರ್ಟ್ ಆಳತೆಯ ಅರ್ಜಿದಾರರ ಭಾವ ಚಿತ್ರ

ಆರ್ಜಿದಾರರ ಬಿ.ಪಿ.ಎಲ್ ಪಡಿತರ ಚೀಟಿ.

ಅರ್ಜಿದಾರರ ಆಧಾರ್ ಗುರುತಿನ ಚೀಟಿ (ಅರ್ಜಿದಾರರ ಬ್ಯಾಂಕ್ ಪಾತಿಯು ಆಧಾರ್ ಗುರುತಿನ ಚೀಟಿ ಸಂಖ್ಯೆಯೊಂದಿಗೆ ಜೋಡಣೆ ಆಗಿರಬೇಕು)

ಅರ್ಜಿದಾರರು ಚಿಕಿತ್ಸೆ ಪಡೆದಿರುವ ಆಸ್ಪತ್ರೆಯ ಸೀಲು ಸಹಿ ಇರುವ ಅಂತಿಮ ಮೂಲ ಬಿಲ್ಲುಗಳು

ಆಸ್ಪತ್ರೆಯ ಬಿಡುಗಡೆ ಸಾರಾಂಶ ಪತ್ರದ ಪ್ರತಿ

ಅರ್ಜಿದಾರರು ಚಿಕಿತ್ಸೆ ಪಡೆಯಬೇಕಾದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಮೂಲ ಅಂದಾಜು ಪಟ್ಟಿ

ಅರ್ಜಿದಾರರು ಬ್ಯಾಂಕ್ ಖಾತೆ ಹೊಂದಿರಬೇಕು, ಸದರಿ ಖಾತೆಯ ಪಾಸ್ ಪುಸ್ತಕದ ಮೊದಲ ಪುಟದ ಪ್ರತಿ (Bank Pass Book / Extract) ಬ್ಯಾಂಕ್ ಖಾತೆ NPCI ಗೆ ಮ್ಯಾಪ್ ಆಗಿರಬೇಕು.

ಅರ್ಜಿದಾರರ ಅಥವಾ ಅವರ ಕುಟುಂಬ ವರ್ಗದವರ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು

 

Related posts

2.50 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ: ನವೆಂಬರ್ ನಲ್ಲಿ 7ನೇ ವೇತನ ಆಯೋಗ ಜಾರಿಗೆ ಸರ್ಕಾರ ಸಿದ್ಧತೆ.

ಪರಿಷತ್ ಗೆ ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ನಾಲ್ವರು ಸಚಿವರಿಂದ ವಿರೋಧ: ಹೈಕಮಾಂಡ್ ಗೆ ಪತ್ರ

ಸಿಎಂ  ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್: ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ 15 ಸಚಿವರು ಭಾಗಿ.