ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನೇತ್ರದಾನ ಜಾಗೃತಿ ಪಾಕ್ಷಿಕ ಮಾಸಾಚರಣೆ: ಜಾಗೃತ ಜಾಥಾ..

ಶಿವಮೊಗ್ಗ: ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನೇತ್ರದಾನ ಜಾಗೃತಿ ಪಾಕ್ಷಿಕ ಮಾಸಾಚರಣೆ ಅಂಗವಾಗಿ ಜಾಥಾ ನಡೆಯಿತು. ಬೆಳಿಗ್ಗೆ ಎಟಿಎನ್‍ಸಿ ಕಾಲೇಜಿನಿಂದ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಹಾಗೂ ಎಟಿಎನ್‍ಸಿಸಿ ವಿದ್ಯಾರ್ಥಿಗಳು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮಹಾವೀರ ವೃತ್ತದಿಂದ ಗೋಪಿ ವೃತ್ತದವರೆಗೆ ಜಾಥಾ ನಡೆಸಿದರು.
ಪ್ರಕೃತಿ ಮಾನವನ ಆಸೆಯನ್ನು ಈಡೇರಿಸುತ್ತದೆ ದುರಾಸೆಯನ್ನಲ್ಲ. ನೇತ್ರದಾನ ಬಹಳ ಮುಖ್ಯ. ಕಣ್ಣನ್ನು ಸುರಕ್ಷತೆಯಿಂದ ನೋಡಿಕೊಳ್ಳಿ ಮುಂತಾದ ಜಾಗೃತಿ ಮೂಡಿಸುವ ಪ್ಲಕಾರ್ಡ್ ಹಿಡಿದು ಘೋಷಣೆಗಳೊಂದಿಗೆ ಜಾಥಾ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ,
ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರುಗಳಾದ ಡಾ. ಮಹೇಶ್, ಡಾ. ಮಲ್ಲಿಕಾರ್ಜುನ, ಡಾ. ಪ್ರದೀಪ್, ರವಿಶಂಕರ್, ಗಾಯಿತ್ರಿ ಶಾಂತಾರಾಮ್. ಅನಿತಾ, ಪ್ರದೀಪ್ ಹಾಗೂ ಡಿವೈಎಸ್ಪಿ ಬಾಲರಾಜ್ ಮುಂತಾದವರಿದ್ದರು.

Related posts

ರಾಜ್ಯದಲ್ಲಿ ಶಕ್ತಿ ಯೋಜನೆಯಡಿ: 46 ಕೋಟಿ ಜನ ಪ್ರಯಾಣ- ಸಾರಿಗೆ ಸಚಿವ ರಾಮಲಿಂಗರೆಡ್ಡಿ

ಕೈಕೊಟ್ಟ ಮುಂಗಾರು ಮಳೆ: ಜನಸಾಮನ್ಯರಿಗೆ ಇನ್ನಷ್ಟು ತಟ್ಟಲಿದೆ ಬೆಲೆ ಏರಿಕೆ ಬಿಸಿ.

ತುಂಗಾ ಉಳಿಸಿ ಜಾಗೃತಿ : ಛಾಯಾಚಿತ್ರ ಪ್ರದರ್ಶನ ಮತ್ತು ನದಿ ಉಳಿಸೋಣ ಕಾರ್ಯಕ್ರಮ.