ಕನ್ನಡಿಗರ ಪ್ರಜಾನುಡಿ
ಕ್ರೈಮ್ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಅವಾಚ್ಯವಾಗಿ ಕಮೆಂಟ್, ತೇಜೋವಧೆ ಯತ್ನ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲು.

 ಶಿವಮೊಗ್ಗ: ಫೇಸ್ ಬುಕ್ ನಲ್ಲಿ  ಅವಾಚ್ಯವಾಗಿ ಕಮೆಂಟ್ ಹಾಕಿ ತೇಜೋವಧೆ ಮಾಡಲು  ಯತ್ನಿಸಿದ ಆರೋ ಪದ ಮೇಲೆ  ಚಕ್ರವರ್ತಿ ಸೂಲಿಬೆಲೆ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೌಗಂಧಿಕ ರಘುನಾಥ್ ಎಂಬುವವರು ದೂರು ನೀಡಿದ್ದಾರೆ.  ಚಕ್ರವರ್ತಿ ಸೂಲಿಬೆಲೆ  ರಾಜ್ಯ ಸಾಮಾಜಿಕ ಜಾಲತಾಣದ ಸಂಚಾಲಕರದ ಸೌಗಂಧಿಕ ರಘುನಾಥ್ ಅವರ ಬಗ್ಗೆ ಅವಾಚ್ಯವಾಗಿ ಫೇಸ್ಬುಕ್ ಅಲ್ಲಿ ಕಾಮೆಂಟ್ ಮಾಡಿದ್ದಲ್ಲದೆ, ಹಾಕಿದ ಕಾಮೆಂಟ್ ಡಿಲೀಟ್ ಮಾಡಿ, ಫೇಕ್ ಅಕೌಂಟ್ ಬಳಸಿ ಎಡಿಟ್ ಮಾಡಿಸಿ ತೇಜೋವಧ ಮಾಡಲು ಪ್ರಯತ್ನಿಸಿದ್ದಾರೆ.

ಚಂದ್ರಯಾನ 3 ಯಶಸ್ವಿಯಾಗಲು ದೇವರಿಗೆ ಕೈ ಮುಗಿದು ಫೋಟೋ ಹಾಕಿ ಎಂದು ಚಕ್ರವರ್ತಿ ಸೂಲಿಬೆಲೆ ಮಾಡಿದ ಪೋಸ್ಟಿಗೆ ವಿಜ್ಞಾನಿಗಳ ಶ್ರಮಕ್ಕೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಆದರೆ ಅದನ್ನು ತೋರಿಕೆಗಾಗಿ ಆಗಲಿ ಅಥವಾ ಫೋಟೋಗಾಗಿಯಾಗಲಿ ದೇವರ ಮುಂದೆ ನಿಲ್ಲಬೇಡಿ ಎಂದು ಸೌಗಂಧಿಕ ರಘುನಾಥ್ ಪ್ರತಿಕ್ರಿಯಿಸಿರುತ್ತಾರೆ. ಅದಕ್ಕೆ ಪ್ರತಿಯಾಗಿ ಸೂಲಿಬೆಲೆ ಚಕ್ರವರ್ತಿ ಅಸಭ್ಯವಾಗಿ ಸೌಗಂಧಿಕ ರಘುನಾಥ್ ಅವರಿಗೆ ನಿನಗೆ ಎಲ್ಲಿ ಯಾಕೆ ಉರಿ ಬಂತು ಎಂಬ ಮಾತುಗಳನ್ನಾಡಿದ್ದಾರೆ.ಹಾಗಾಗಿ ಜಿಲ್ಲಾ ಕಾಂಗ್ರೆಸ್ಸಿನ ಮಹಿಳಾ ಮುಖಾಂಡರಾದ ಸ್ಟೇಲ್ಲಾ ಮಾರ್ಟೀನ್, ಅರ್ಚನಾ, ಸಂಧ್ಯಾರಾಣಿ, ಶಮೀಮ್ ಭಾನು, ಶೋಭಾ, ನಾಗರತ್ನ, ಗ್ಲಾಡಿ, ರಸಿಯ, ಸಲೀಮ ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಹಾಗೆಯೇ ಫೇಕ್ ಅಕೌಂಟ್ ಮೂಲಕ ಸಿದ್ದರಾಮಯ್ಯ ಅವರ ಬಗ್ಗೆ ಅಸಭ್ಯವಾಗಿ ಪೋಸ್ಟ್ ಮಾಡಿದವರ ವಿರುದ್ಧವು ದೂರು ದಾಖಲಿಸಲಾಯಿತು.

Related posts

ಪೋಕ್ಸೋ ಪ್ರಕರಣದಲ್ಲಿ ಜಾಮೀನು:  ಚಿತ್ರದುರ್ಗ ಕಾರಾಗೃಹದಿಂದ ಮುರುಘಾ ಶ್ರೀ ಬಿಡುಗಡೆ.

ರಾಜೀ ಸಂಧಾನ ಮೂಲಕ ವ್ಯಾಜ್ಯಗಳ ಪರಿಹಾರ ಕಂಡುಕೊಳ್ಳಬೇಕು : ನ್ಯಾ.ಆರ್.ದೇವದಾಸ್

ವನ್ಯಜೀವಿಗಳ ಸಂರಕ್ಷಣೆ, ನಾಗರಿಕ ಸಮಾಜದ ಹೊಣೆ: ಡಾ. ಸಂಜಯ್ ಗುಬ್ಬಿ