ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಚಂದ್ರಯಾನ-3 ಯಶಸ್ವಿ: ಆ.26ಕ್ಕೆ ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ.

 

 ಬೆಂಗಳೂರು:  ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಲ್ಯಾಂಡ್​ ಆಗಿದ್ದು,  ಸಂಜೆ ನಿಗಧಿತ 6:04ರ ಸಮಯದಲ್ಲಿ ವಿಕ್ರಮ್​ ಲ್ಯಾಂಡರ್​ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಇಳಿದಿದೆ.  ಚಂದ್ರಯಾನ ಯಶಸ್ವಿಯಾದ ಹಿನ್ನೆಲೆ ಆಗಸ್ಟ್ 26ಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. .

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಮೋದಿ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಅಲ್ಲಿನ ಜೊಹಾನ್ಸ್‌ಬರ್ಗ್‌ನಲ್ಲಿದ್ದಾರೆ. ಆಗಸ್ಟ್ 26 ರಂದು ಅಲ್ಲಿಂದಲೇ ಅವರು ನೇರವಾಗಿ  ಬೆಂಗಳೂರಿಗೆ ಆಗಮಿಸಲಿದ್ದಾರೆ.

.ಆಗಸ್ಟ್ 26ರ ಬೆಳಿಗ್ಗೆ  5.55 ಕ್ಕೆ ಹೆಚ್ಎಎಲ್ ಗೆ ಪ್ರಧಾನಿ ಮೋದಿ ಆಗಮಿಸಲಿದ್ದು 6.30ರವರೆಗೆ  ಹೆಚ್ ಎಎಲ್ ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.  ಬೆಳಿಗ್ಗೆ  7 ಗಂಟೆಗೆ ಇಸ್ರೋಗೆ ಭೇಟಿ ನೀಡಿ  8 ಗಂಟೆವರೆಗೆ  ಸಭೆ ನಡೆಸಲಿದ್ದಾರೆ. ನಂತರ 8.35ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

Related posts

10 ರಿಂದ 15 ಮಾಜಿ ಮತ್ತು ಹಾಲಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧ- ಕೃಷಿ ಸಚಿವ ಚಲುವರಾಯಸ್ವಾಮಿ ಹೊಸ ಬಾಂಬ್.

ಡೀಸೆಲ್ ಎಂಜಿನ್ ವಾಹನಗಳ ಬಳಕೆದಾರರಿಗೆ ಶಾಕ್: ಶೇ.10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲು ಸರ್ಕಾರ ಪ್ಲಾನ್.

ಗಾಂಧೀಜಿ  ಹಾಗೂ ಶಾಸ್ತ್ರಿಯವರ ಮೌಲ್ಯಗಳು ನಮಗೆ ದಾರಿದೀಪ-ಸಿಎಂ ಸಿದ್ದರಾಮಯ್ಯ