ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ದಿನ ಬಿಟ್ಟು ದಿನ ವಾಹನ ನಿಲುಗಡೆಗೆ ಅಧಿಸೂಚನೆ

ಶಿವಮೊಗ್ಗ, :  ಶಿವಮೊಗ್ಗ ನಗರ ಪೂರ್ವ ಸಂಚಾರ ಪೆÇಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ಸಂಚಾರ ವೃತ್ತದ ಪೆÇಲೀಸ್ ಠಾಣೆಗಳ ಕೆಳಕಂಡ ಪ್ರಮುಖ ರಸ್ತೆಗಳಲ್ಲಿ ದೇವಸ್ಥಾನ, ಆಸ್ಪತ್ರೆ, ಬ್ಯಾಂಕ್, ಹೋಟೆಲ್ ಮತ್ತು ಲಾಡ್ಜ್‍ಗಳು ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ, ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ದಿನ ಬಿಟ್ಟು ದಿನ ಪಾಕಿರ್ಂಗ್ ವಾಹನ ನಿಲುಗಡೆ ಹಾಗೂ ವಾಹನ ನಿಲುಗಡೆ ನಿμÉೀಧ ಸಂಬಂಧ ಆದೇಶವನ್ನು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಹೊರಡಿಸಿರುತ್ತಾರೆ.
ಮೋಟಾರು ವಾಹನ ಕಾಯ್ದೆ 1988 ಕಲಂ 177 ರನ್ವಯ ಪೂರ್ವ ಸಂಚಾರ ಪೆÇಲೀಸ್ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ  ಸುಗಮ ಸಂಚಾರಕ್ಕೆ  ಈ ಕೆಳಕಂಡಂತೆ ದಿನ ಬಿಟ್ಟು ದಿನ  ವಾಹನ ನಿಲುಗಡೆಗೆ ಆದೇಶಿಸಲಾಗಿದೆ.
ರತ್ನಮ್ಮ ಮಾಧವ ರಾವ್ ರಸ್ತೆಯ ಸುರಭಿ ಹೋಟೆಲ್ ಕ್ರಾಸ್‍ನಿಂದ ಆದಿತ್ಯ ಡಯಾಗ್ನೋಸ್ಟಿಕ್ ಕ್ರಾಸ್‍ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ. ಪಾರ್ಕ್ ಬಡಾವಣೆಯ ಮುಖ್ಯ ರಸ್ತೆಯ ಕೆನರಾ ಬ್ಯಾಂಕ್ ಕ್ರಾಸ್ (ಹಳೆಯ ಸಿಂಡಿಕೇಟ್ ಬ್ಯಾಂಕ್ ) ನಿಂದ ಬಾಲ್ ರಾಜ್ ಅರಸ್ ರಸ್ತೆಯ ಜಾಯಾಲುಕಾಸ್ (ಮಧುರಾ ಪ್ಯಾರಡೈಸ್ ) ಕ್ರಾಸ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ. ವಾಸವಿ ವೃತ್ತದಿಂದ ರಾಘವೇಂದ್ರ ಸ್ವಾಮಿ ಮಠದ ರಸ್ತೆಯವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನಬಿಟ್ಟು ದಿನ ವಾಹನ ನಿಲುಗಡೆ. ತಿಲಕ್ ನಗರ ಮುಖ್ಯ ರಸ್ತೆಯ ಭರತ್ ನ್ಯೂರೋಕ್ಲೀನಿಕ್ ನಿಂದ ಪಾರ್ಕ್ ಬಡವಣೆಯ ಮುಖ್ಯ ರಸ್ತೆ (ರಾಘವೇಂದ್ರ ಸ್ವಾಮಿ ಮಠದ ಹಿಂಭಾಗ ರಸ್ತೆ) ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ. ಕುವೆಂಪು ರಸ್ತೆ ನಂದಿ ಪೆಟ್ರೋಲ್ ಬಂಕ್ ನಿಂದ ಶಿವಶಂಕರ ಗ್ಯಾರೇಜ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ. ದಿ|| ಪಂಡಿತ್ ದೀನ್ ದಯಾಳ್ ರಸ್ತೆಯ ಆಕಾಶ್ ಇನ್ ಹೋಟೇಲ್ ನಿಂದ ಪಂಚಮುಖಿ ಅಂಜನೇಯ ಸ್ವಾಮಿ ದೇವಸ್ಥಾನದವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ.
*ವಾಹನ ನಿಲುಗಡೆ ನಿμÉೀಧ ಮತ್ತು ವಾಹನ ನಿಲುಗಡೆ :*
ತಿಲಕ್ ನಗರ ಮುಖ್ಯ ರಸ್ತೆಯಿಂದ ಭರತ್ ನ್ಯೂರೋಕ್ಲೀನಿಕ್ ರಸ್ತೆಯವರೆಗೆ ಬಲಭಾಗದಲ್ಲಿ ವಾಹನ ನಿಲುಗಡೆ ನಿμÉೀಧಿಸಿ, ರಸ್ತೆಯ ಎಡಭಾಗದಲ್ಲಿ ವಾಹನ ನಿಲುಗಡೆ. ತಿಲಕ್ ನಗರ ರಾಘವೇಂದ್ರಸ್ವಾಮಿ ಮಠದ ರಸ್ತೆಯಿಂದ ಜಿಲ್ಲಾ ಭೋವಿ ಸಮುದಾಯ ಭವನದವರೆಗೆ ಎಡಭಾಗದಲ್ಲಿ ವಾಹನ ನಿಲುಗಡೆ ನಿμÉೀಧಿಸಿ, ಬಲಭಾಗದಲ್ಲಿ ವಾಹನ ನಿಲುಗಡೆ. ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಕ್ರಾಸ್ ನಿಂದ ಕೆನರಾ ಬ್ಯಾಂಕ್ ಕ್ರಾಸ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿμÉೀಧ. ಹೆಲಿಪ್ಯಾಡ್ ಸರ್ಕಲ್ ನಿಂದ ಕುವೆಂಪು ರಸ್ತೆ ನಂದಿ ಪೆಟ್ರೋಲ್ ಬಂಕ್ ವರೆಗೆ ವಾಹನ ನಿಲುಗಡೆ ನಿಷೇಧ. ದಿ|| ಪಂಡಿತ್ ದೀನ್ ದಯಾಳ್ ರಸ್ತೆಯಲ್ಲಿ ಜ್ಯೋತಿ ಗಾರ್ಡನ್ ನಿಂದ ಆಕಾಶ್ ಇನ್ ಹೋಟೆಲ್ ವರೆಗೆ ವಾಹನ ನಿಲುಗಡೆ ನಿμÉೀಧ. ದಿ|| ಪಂಡಿತ್ ದೀನ್ ದಯಾಳ್ ರಸ್ತೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬಾಲಾಜಿ ಟೂರ್ಸ್ ಅಂಡ್ ಟ್ರಾವೆಲ್ಸ್‍ವರೆಗೆ ವಾಹನ ನಿಲುಗಡೆ ನಿಷೇಧ. ಕುವೆಂಪು ರಸ್ತೆಯ ಶಿವಶಂಕರ ಗ್ಯಾರೇಜ್‍ನಿಂದ ಬಿ.ಜೆ.ಪಿ ಪಾರ್ಟಿ ಆಫೀಸ್ ಕ್ರಾಸ್‍ವರೆಗೆ ಬಲಭಾಗದಲ್ಲಿ ಮಾತ್ರ ವಾಹನ ನಿಲುಗಡೆಗೆ ಆದೇಶಿಸಲಾಗಿದೆ.

Related posts

ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಕಡೆ NIA ದಾಳಿ: 8 ಮಂದಿ ಅಕ್ರಮ ಬಾಂಗ್ಲಾ ವಲಸಿಗರು ವಶಕ್ಕೆ.

ಯಾವುದೇ ಕಾಲೇಜಿನ ಕ್ರಿಯಾಶೀಲತೆಯ ಸಂಕೇತ ಅಲ್ಲಿರುವ ಎನ್. ಎನ್. ಎಸ್. : ಡಾ. ಅರುಣ್ ಹೊಸಕೊಪ್ಪ

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಅತ್ಯಂತ ಮುಖ್ಯ-ಬಿ.ಸಿ.ಗೀತಾ