ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಚಂದ್ರಯಾನ-3 ವಿಕ್ರಮ್ ಯಶಸ್ವಿ ಲ್ಯಾಂಡ್ ಗೆ ಶಾಲಾ ಮಕ್ಕಳಿಂದ ಪೂಜೆ ಪ್ರಾರ್ಥನೆ.

ಶಿವಮೊಗ್ಗ : ದೇಶದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ 3 ಮಹತ್ವದ ಹಂತ – ತಲುಪಿದ್ದು ಇಂದು ಸಂಜೆ 6 ಘಂಟೆ 4 ನಿಮಿಷಕ್ಕೆ, ವಿಕ್ರಮ್ ಲ್ಯಾಂಡರ್‍ನ್ನು ಚಂದ್ರನಂಗಳದಲ್ಲಿ ಇಳಿಸಿ ಮೈಲುಗಲ್ಲನ್ನು ಸ್ಥಾಪಿಸಲಿರುವ ನಮ್ಮ ಹಮ್ಮೆಯ ಇಸ್ರೋ.
1969 ರಲ್ಲಿ ಡಾ. ವಿಕ್ರಂ ಸಾರಾಭಾಯಿ ನೇತೃತ್ವದಲ್ಲಿ ಸಮಾನ ಮನಸ್ಕರೊಂದಿಗೆ ಪ್ರಾರಂಭವಾದ ಸಂಸ್ಥೆ ಇಲ್ಲಿಯವರೆಗೆ ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿ ಅಂತರಿಕ್ಷದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದೆ. ಜುಲೈ 14ರಂದು ಡಾ. ಸೋಮನಾಥ್ ಅಧ್ಯಕ್ಷತೆಯಲ್ಲಿ ನಿರ್ಮಾಣವಾದ ಚಂದ್ರಯಾನ – 3 ಭೂಮಿಯಿಂದ ಹೊರಟು ಅತ್ಯಂತ ಯಶಸ್ವಿಯಾಗಿ ಇಂದು ಚಂದ್ರನಲ್ಲಿ ಪಾದಾರ್ಪಣೆ ಮಾಡಿ ಯಶಸ್ವಿ, ಕಾರ್ಯಾಚರಣೆ ಮಾಡಲೆಂದು ಪ್ರಾರ್ಥಿಸಿ ಪ್ರಿಯದರ್ಶಿನಿ ಇಂಗ್ಲಿμï ಶಾಲೆಯ ವಿದ್ಯಾರ್ಥಿಗಳು ಗಣಪತಿ ಮತ್ತು ಶಾರದೆಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್, ಉಪ ಪ್ರಾಂಶುಪಾಲರಾದ ಪ್ರವೀಣ್ ಎಸ್. ಎಸ್. ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related posts

ನ.1ರಂದು ಕರ್ನಾಟಕ ಸಂಭ್ರಮ-50: ಕೆಂಪು ಹಳದಿ ಬಣ್ಣದ ರಂಗೋಲಿ ಬಿಡಿಸಿ, ಗಾಳಿಪಟ ಹಾರಿಸಿ…

ಉಪನ್ಯಾಸಕರೊಬ್ಬರಿಗೆ ಲಾಂಗ್ ತೋರಿಸಿ ದರ್ಪ ಮೆರೆದ ವಿದ್ಯಾರ್ಥಿ

ಪುಣ್ಯಭೂಮಿ ಭಾರತದಲ್ಲಿ ಜನಿಸಿದ ನಾವೇ ಧನ್ಯರು-ಡಾ. ಧನಂಜಯ್ ಸರ್ಜಿ