ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಚಂದ್ರಯಾನ ಯಶಸ್ವಿಯಾಗಲು ಶಿವಮೊಗ್ಗ ಯೋಗಪಟುಗಳ ಶುಭಹಾರೈಕೆ

ಶಿವಮೊಗ್ಗ: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ ಚಂದ್ರನ ಮೇಲ್ಮೈಗೆ ಇಳಿಯಲು ಸಿದ್ಧವಾಗಿದ್ದು, ಶಿವಮೊಗ್ಗ ನಗರದ ಶಿವಗಂಗಾ ಯೋಗಕೇಂದ್ರದ ಯೋಗಪಟುಗಳು ಚಂದ್ರಯಾನ ಯಶಸ್ವಿಯಾಗಲು ಶುಭಹಾರೈಸಿದ್ದಾರೆ.
ಭಾರತ ಐತಿಹಾಸಿಕ ಚಂದ್ರಯಾನ 3 ವಿಕ್ರಂ ಲ್ಯಾಂಡರ್  ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆಗಲು ಶಿವಗಂಗಾ ಯೋಗ ಕೇಂದ್ರದ ಎಲ್ಲಾ ಯೋಗಪಟುಗಳು ಶಿವಮೊಗ್ಗದಲ್ಲಿ ಪ್ರಾರ್ಥನೆ ಹಾಗೂ ಹಾರೈಕೆ ಸಲ್ಲಿಸಿದರು.
ಬುಧವಾರ ಬೆಳಗ್ಗೆ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಎಲ್ಲಾ ಯೋಗಪಟುಗಳು ಇಸ್ರೋ ಸಂಸ್ಥೆಯ ವಿಜ್ಞಾನಿಗಳಿಗೆ ಹಾಗೂ ವಿಶೇಷವಾಗಿ ಶಿವಮೊಗ್ಗದ ವಿಜ್ಞಾನಿಗಳಾದ ಪುಟ್ಟಮ್ಮ ಶಿವಾನಿ ಹಾಗೂ ಚೈತ್ರ ಅವರಿಗೆ ವಿಶೇಷ ಧನ್ಯವಾದಗಳು ಅರ್ಪಿಸಿದರು.
ಹಗಲಿರಳು ಶ್ರಮಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂತಹ ಸಾಧನೆ ಮಾಡುತ್ತಿರುವುದು ತುಂಬಾ ಶ್ಲಾಘನೀಯವಾಗಿದೆ. ನಮ್ಮ ದೇಶದ ಹೆಮ್ಮೆ ವಿಶ್ವ ಭೂಪಟದಲ್ಲಿ ನಮ್ಮ ದೇಶ ದಾಖಲಾಗಲಿದೆ ಎಂದು ಯೋಗ ಶಿಕ್ಷಕ ಜಿಎಸ್ ಓಂಕಾರ್, ಹರೀಶ್, ವಿಜಯ ಕೃಷ್ಣ ಅಭಿಮತ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಯೋಗಪಟುಗಳು ಆಲ್ ದ ಬೆಸ್ಟ್ ಇಸ್ರೋ, ಆಲ್ ದ ಬೆಸ್ಟ್ ಚಂದ್ರಯಾನ 3 ಎಂದು ಘೋಷಣೆಗಳನ್ನು ಕೂಗುವುದರ ಮುಖಾಂತರ ಶುಭ ಹಾರೈಸಿದರು. ಸಾರ್ವಜನಿಕರು ಐತಿಹಾಸಿಕ ಕ್ಷಣವನ್ನು ವೀಕ್ಷಣೆ ಮಾಡಲು ಎಲ್ಲ ಯೋಗಪಟುಗಳು ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಉದ್ಯಮಿಗಳಾದ ಮಹೇಶ್, ಶ್ರೀನಿವಾಸ್, ನರಸೋಜಿ ರಾವ್, ಕಾಟನ್ ಜಗದೀಶ್, ಆನಂದ್, ಗಾಯತ್ರಿ, ಸುಜಾತ, ದೀಪಕ್ ಹಾಗೂ ಎಲ್ಲ ಯೋಗಪಟುಗಳು ಉಪಸ್ಥಿತರಿದ್ದರು.

Related posts

ಇತ್ತ ಗ್ಯಾಸ್ ಬೆಲೆ ಇಳಿಕೆ ಬೆನ್ನಲ್ಲೆ ಅತ್ತ ಶೀಘ್ರದಲ್ಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ?

ಅ.28ರಂದು ಶಿವದೂತ ಗುಳಿಗ ಪ್ರದರ್ಶನ.

ಮಾಜಿ ಗೃಹಸಚಿವ ಅರಗ ಜ್ಞಾನೇಂದ್ರರನ್ನ ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮನವಿ