ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮಹಾತ್ಮ ಗಾಂಧಿ ಪ್ರತಿಮೆ ದ್ವಂಸಗೊಳಿಸಿರುವುದು ಅತ್ಯಂತ ವಿಕೃತಿ ಕೃತ್ಯ- ನಾಜೀಮ ಖಂಡನೆ.

ಶಿವಮೊಗ್ಗ: ಮಹಾತ್ಮ ಗಾಂಧಿ ಪ್ರತಿಮೆ ದ್ವಂಸಗೊಳಿಸಿರುವುದು ಅತ್ಯಂತ ವಿಕೃತಿ ಯಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಮಹಿಳಾ ಘಟಕದ  ಜಿಲ್ಲಾದ್ಯಕ್ಷೆ  ನಾಜೀಮ ತಿಳಿಸಿದ್ದಾರೆ.
 ಹೊಳೆ ಹೊನ್ನೂರು ಸರ್ಕಲ್ ನಲ್ಲಿದ್ದ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸುವ ಮೂಲಕ ಕೆಲ ಕಿಡಿಗೇಡಿಗಳು ತಮ್ಮ ವಿಕೃತ ಮನೋಭಾವನೆ ಹೊರ ಹಾಕಿದ್ದಾರೆ.
ಇತ್ತೀಚಿನ ವರ್ಷ ಗಳಲ್ಲಿ ಕೆಲವರು ಗಾಂಧೀಜಿ ಯ ಬಗ್ಗೆ ಅಪಪ್ರಚಾರ ಮಾಡುತ್ತಾ ಗೂಡ್ಸೆ ಯನ್ನು ವಿಜೃಂಬಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಗಾಂಧೀಜಿ ಯೇ ಮರೆಯಾಗಿ ಆ ಸ್ಥಾನದಲ್ಲಿ ಗೂಡ್ಸೆ ಬಂದರೆ ಆಶ್ಚರ್ಯ ವಿಲ್ಲ
 ಮಹಾತ್ಮ ಗಾಂಧಿ ನೆಡೆದಾಡುವ ದೇವರ ಸ್ವರೂಪಿ.ಈ ದೇಶದ ಸ್ವಾತಂತ್ರ್ಯ ಕ್ಕಾಗಿ ಶಾಂತಿ ಯಿಂದಲೇ ಹೋರಾಡಿದವರು.
ಪ್ರತಿಮೆ ದ್ವಂಸ ಮಾಡುವ ಮೂಲಕ ಈ ದೇಶದ ಪ್ರಜಾಪ್ರಭುತ್ವ ವನ್ನೆ ನಾಶ ಮಾಡಿದ್ದಾರೆ ಇದರ ಹಿಂದೆ ಗಾಂಧಿ ವಿರೋಧಿಗಳ ಕೈವಾಡವಿದೆ.ಒಡೆದ ಮೇಲೂ ಕೆಲವರು ಒಳಗೊಳಗೆ ಹರ್ಷದಿಂದ ಇದ್ದಾರೆ
ಅದ್ದರಿಂದ ಕೂಡಲೇ ಜಿಲ್ಲಾಡಳಿತವು ಕಿಡಿ  ಗೇಡಿಗಳನ್ನು ಬಂಧಿಸಬೇಕು ಮತ್ತು ಇಂತಹ ಘಟನೆಗಳು ಮರುಕಳಿಸ ಬಾರದು ಎಂದು  ಆಗ್ರಹಿಸಿದ್ದಾರೆ.

Related posts

ನಾಡಿಗೆ ನಾರಿಯ ನಡಿಗೆ ವಿಶೇಷ ಕಾರ್ಯಕ್ರಮ ನವೆಂಬರ್ 4ಕ್ಕೆ

ಕಾವೇರಿ ನದಿ ನೀರಿಗೆ ತಮಿಳುನಾಡು ಕ್ಯಾತೆ: ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಕರ್ನಾಟಕ

ಅಂಗವಿಕಲತೆ ಶಾಪವಲ್ಲ- ಡಾ. ಧನಂಜಯ ಸರ್ಜಿ