ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಇಂದು ಚಂದ್ರನ ಅಂಗಳಕ್ಕೆ ಚಂದ್ರಯಾನ-3: ಯಶಸ್ವಿ ಲ್ಯಾಂಡಿಂಗ್‌ ಗಾಗಿ ದೇಶಾದ್ಯಂತ ವಿಶೇಷ ಪೂಜೆ ಪುನಸ್ಕಾರ, ಪ್ರಾರ್ಥನೆ..

 

ಬೆಂಗಳೂರು: ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋ ಕ್ಷಣಕ್ಕಾಗಿ ಇಡೀ ದೇಶ ಭಾರಿ ಕುತೂಹಲದಿಂದ ಕಾಯುತ್ತಿದೆ.  ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್‌ ಗಾಗಿ ದೇಶಾದ್ಯಂತ ವಿಶೇಷ ಪೂಜೆ ಪುನಸ್ಕಾರ, ಪ್ರಾರ್ಥನೆ ನಡೆಯುತ್ತಿದೆ

ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಜುಲೈ 14ರಂದು ಆಗಸಕ್ಕೆ ಚಿಮ್ಮಿದ್ದ ಚಂದ್ರಯಾನ 3 ಮಿಷನ್ ಯಶಸ್ಸಿನಂತ ಸಾಗಿದ್ದು ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿಯಲಿದೆ. 17 ನಿಮಿಷದಲ್ಲಿ ವಿಕ್ರಮ್ ಲ್ಯಾಂಡಿಂಗ್ ಪ್ರಕ್ರಿಯೆ ನಡೆಯಲಿದೆ. ಇನ್ನು ಚಂದ್ರಯಾನ-3ರ ಯಶಸ್ಸಿಗಾಗಿ ಭಾರತೀಯರು ದೇವರ ಮೊರೆ ಹೋಗಿದ್ದು ದೇಶದೆಲ್ಲೆಡೆ ಪೂಜೆ-ಪುನಸ್ಕಾರಗಳನ್ನು ಮಾಡಲಾಗುತ್ತಿದೆ.

ಚಂದ್ರಯಾನ ಯಶಸ್ಸಿಗೆ ರಾಜ್ಯಾದ್ಯಂತ ಪೂಜೆ, ಪುನಸ್ಕಾರವೇ ನಡೆಯುತ್ತಿದೆ. ಬೆಂಗಳೂರಿನ ಬಸವನಗುಡಿ ದೇವಾಲಯದಲ್ಲಿ ವಿಘ್ನ ವಿನಾಯಕನಿಗೆ ವಿಶೇಷ ಪೂಜೆ ಮಾಡಲಾಯಿತು. ದೊಡ್ಡ ಗಣೇಶನ ಮುಂದೆ ಚಂದ್ರಯಾನ- 3 ರಾಕೆಟ್ ಪೋಸ್ಟರ್ ಇಟ್ಟು ಪೂಜೆ ಸಲ್ಲಿಸಲಾಯಿತು.

ಇನ್ನು ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ತಂಡ ಶುಭ ಕೋರಿದ್ದು ಒಡಿಶಾದ ಪುರಿ ಬೀಚ್​​ನಲ್ಲಿ ಮರಳು ಕಲೆ ರಚಿಸಿ ವಿಕ್ರಂ ಲ್ಯಾಂಡರ್​​​ನ ಸಾಫ್ಟ್​ ಲ್ಯಾಂಡಿಂಗ್‌ಗೆ ಶುಭ ಕೋರಿದ್ದಾರೆ. ಬೀಚ್‌ಗೆ ಬರುವ ಪ್ರವಾಸಿಗರು ಕೂಡ ಮರಳು ಕಲೆಯಲ್ಲಿ ಮೂಡಿರುವ ಚಂದ್ರಯಾನವನ್ನ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ-3 ಯಶಸ್ಸಿಗೆ ಶ್ರೀಶೈಲ ಜಗದ್ಗುರುಗಳು ಶುಭ ಹಾರೈಸಿದ್ದಾರೆ. ಅಲ್ಲದೇ ಇಂದು (ಆ.23) ರಂದು ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹೀಗೆ ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್‌ ಗಾಗಿ ದೇಶಾದ್ಯಂತ ವಿಶೇಷ ಪೂಜೆ ಪುನಸ್ಕಾರ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

Related posts

ಉದ್ಯಮಿಗೆ ಚೈತ್ರಾ ಕುಂದಾಪುರ ಗ್ಯಾಂಗ್ ವಂಚನೆ ಕೇಸ್ : 8 ಆರೋಪಿಗಳ ಬಂಧನ: 2 ಕೋಟಿ ಹಣ ಜಪ್ತಿ.

ತಪ್ಪಿತಸ್ಥರನ್ನು ಗಲ್ಲಿಗೇರಿಸಿ: ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಬಾಲಾಜಿ

ಮೇಲ್ಮಟ್ಟದ ನ್ಯಾಯಾಲಯದಲ್ಲಿ ಮೀಸಲಾತಿ ಅಗತ್ಯ- ಸಿಎಂ ಸಿದ್ದರಾಮಯ್ಯ ಅಭಿಮತ