ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಪ್ರಕೃತಿಯ ವಿಸ್ಮಯವು ಛಾಯಾಚಿತ್ರಗಳಲ್ಲಿ ಸೆರೆ- ಡಾ. ಶೇಖರ್ ಗೌಳೇರ್

ಶಿವಮೊಗ್ಗ: ವಿದ್ಯಾರ್ಥಿಗಳು ಪರಿಸರದ ಸುತ್ತಲೂ ನಡೆಯುವ ಪ್ರಕೃತಿ ವಿಸ್ಮಯಗಳನ್ನು ಕುತೂಹಲದಿಂದ ಗಮನಿಸಿ ಸೆರೆ ಹಿಡಿಯಬಹುದಾದ ಕಲೆಯೇ ಛಾಯಾಗ್ರಹಣವಾಗಿದೆ ಎಂದು ಛಾಯಾಗ್ರಾಹಕ, ಸಂಪನ್ಮೂಲ ವ್ಯಕ್ತಿ ಡಾ. ಶೇಖರ್ ಗೌಳೇರ್ ಹೇಳಿದರು.
ಶಿವಮೊಗ್ಗ ನಗರದ ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಯೂತ್ ಹಾಸ್ಟೆಲ್ ತರುಣೋದಯ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಛಾಯಾಚಿತ್ರ ಪ್ರದರ್ಶನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ಹೂವಿನ ಮಕರಂದ ಹೀರುವ ಕೀಟವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಗಳನ್ನು ಪಡೆದ ಅನೇಕ ಉದಾಹರಣೆಗಳಿವೆ ಎಂಬ ಕೆಲವು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಯೂತ್ ಹಾಸ್ಟೆಲ್ ತರುಣೋದಯ ಘಟಕದ ಅಧ್ಯಕ್ಷ ವಾಗೇಶ್ ಮಾತನಾಡಿ, ಮನುಷ್ಯ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ದಿಸೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಮಾದರಿ ವ್ಯಕ್ತಿತ್ವ ನಮ್ಮದಾಗಿಸಿಕೊಳ್ಳುವತ್ತ ಜೀವನ ಮುನ್ನಡೆಸಬೇಕು ಎಂದು ಸಲಹೆ ನೀಡಿದರು.
ಡಿವಿಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಶಿವಮೊಗ್ಗ ನಂದನ್ ಛಾಯಾಗ್ರಾಹಣದಿಂದ ಹೆಸರುವಾಸಿ ಆದವರು. ಪ್ರಕೃತಿಯ ಸೂಕ್ಷ್ಮ ಕ್ರಿಯೆಗಳನ್ನು ಸೆರೆಹಿಡಿಯಲು ಏಕಾಂತ ಮನಸ್ಥಿತಿ ಮುಖ್ಯ. ಛಾಯಾಗ್ರಾಹಣದಲ್ಲಿ ವಿಶೇಷ ಆಸಕ್ತಿ ಅಗತ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಸಕ್ತಿ ಕೊಡುವಷ್ಟು ಮಹತ್ವವನ್ನು ಇನ್ನಿತರ ಸಾಮಾಜಿಕ ಕ್ಷೇತ್ರಗಳಿಗೂ ನೀಡಬೇಕು. ಪ್ರಕೃತಿಯ ವಿಸ್ಮಯಗಳನ್ನು ಫೋಟೋಗ್ರಾಫಿ ಮೂಲಕ ಗುರುತಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಪ್ರೊ. ಕುಮಾರಸ್ವಾಮಿ ಪ್ರೊ. ಸುಧಾಕರ್, ವಿಭಾಗದ ಮುಖ್ಯಸ್ಥ ಅರವಿಂದ್ ಜಿ ವಿ, ಶಿವಲಿಂಗಂ, ಲತಾ ಬಿ ಎಸ್, ಡಾ. ಡಿ.ಬಿ.ಶಿವರುದ್ರಪ್ಪ ಇನ್ನಿತರರು ಹಾಜರಿದ್ದರು.

Related posts

ಭ್ರಷ್ಟ ಅಧಿಕಾರಿಗಳಿಗೆ ಶಾಕ್: ರಾಜ್ಯಾದ್ಯಂತ 50 ಕಡೆಗಳಲ್ಲಿ ಲೋಕಾಯುಕ್ತ ದಾಳಿ, ಪರಿಶೀಲನೆ.

ನಾಟಕ ಪ್ರದರ್ಶನ ವೇಳೆ ಸ್ಟೇಜ್ ಮೇಲೆಯೇ ಹೃದಯಾಘಾತ:  ಕುಸಿದು ಬಿದ್ದು  ಕಲಾವಿದ ಸಾವು.

ವಿದ್ಯಾರ್ಥಿಗಳು ಸಾಮಾಜಿಕ ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳಿ-ಡಾ.ವೈ.ಎಂ.ಉಪ್ಪಿನ್