ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಆ.22 ರಿಂದ 31ರ ವರೆಗೆ ದಶೋಪನಿಷತ್ ಉಪನ್ಯಾಸ ಕಾರ್ಯಕ್ರಮ.

ಶಿವಮೊಗ್ಗ: ಅರ್ಚಕವೃಂದ, ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಂಸ್ಕøತೋತ್ಸವ ಪ್ರಯುಕ್ತ ಆ.22 ರಿಂದ 31ರ ವರೆಗೆ ಹತ್ತು ದಿನಗಳ ಕಾಲ ಪ್ರತಿ ದಿನ ಸಂಜೆ 6.30 ರಿಂದ 8 ಗಂಟೆಯವರೆಗೆ ರವೀಂದ್ರ ನಗರದಲ್ಲಿರುವ ಶ್ರೀ ಪ್ರಸನ್ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ವಿದ್ವಾಂಸರಿಂದ ದಶೋಪನಿಷತ್ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಕøತ ಭಾರತಿ ಜಿಲ್ಲಾ ಸಂಯೋಜಕ ಹಾಗೂ ತರುಣೋದಯ ಸಂಸ್ಕøತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ ತಿಳಿಸಿದರು.
ಅವರು ಇಂದು ಮಥುರಾ ಪ್ಯಾರಡೈಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸನಾತನ ಹಿಂದೂ ಧರ್ಮವು ವೇದಗಳನ್ನು ಧರ್ಮಗ್ರಂಥವೆಂದು ಪರಿಗಣಿಸುತ್ತದೆ. ವೇದಗಳು ಅಪೌರುμÉೀಯ, ವೇದಗಳನ್ನು ವೇದವ್ಯಾಸರು ನಾಲ್ಕು ವಿಭಾಗವಾಗಿ ಕೊಟ್ಟಿದ್ದಾರೆ. ಇಂತಹ ವೇದಗಳ ಕೊನೆಯ ಭಾಗವೇ ಉಪನಿಷತ್ತು. ವೇದಗಳಲ್ಲಿ ನಾವು ಮಾಡಬೇಕಾದ ಕರ್ಮಗಳು, ಭಗವಂತನ ಧ್ಯಾನ, ಭಗವಂತನಿಗೂ ನಮಗೂ ಇರುವ ಸಂಬಂಧವು ಯಾವುದು ಎಂಬುದನ್ನು ಹೇಳಿದೆ ಎಂದರು.
ಉಪನಿಷತ್ತುಗಳಲ್ಲಿ ಮುಖ್ಯವಾಗಿ ಭಗವಂತನ ಸ್ವರೂಪದ ವಿಚಾರ, ಕರ್ಮಗಳು, ಧ್ಯಾನ ಇವುಗಳಿಗೆ ಒಂದಕ್ಕೊಂದು ಇರುವ ಸಂಬಂಧವನ್ನು ಇವೆರಡಕ್ಕೂ ಭಗವಂತನನ್ನು ತಿಳಿಸುವ ಜ್ಞಾನಕ್ಕೂ ಇರುವ ಸಂಬಂಧವನ್ನು ತಿಳಿಸುತ್ತದೆ. ಉಪನಿಷತ್ತು ಎಂದರೆ ರಹಸ್ಯವೆಂದು ಅರ್ಥ, ಮನುಷ್ಯನು ತಿಳಿದುಕೊಳ್ಳಲೇ ಬೇಕಾಗಿರುವ ರಹಸ್ಯವೆಂದರೆ ಅದು ಪರಮಾತ್ಮ ಈ ರಹಸ್ಯವನ್ನು ಅರಿತುಕೊಂಡರೆ ಮನುಷ್ಯ ಜನ್ಮ ಸಾರ್ಥಕ ಆದ್ದರಿಂದ ಉಪನಿಷತ್ತುಗಳಿಗೆ ರಹಸ್ಯವೆಂದು ಹೆಸರಿದೆ ಎಂದರು.
ಆಸಕ್ತರು ಈ ಉಪನಿಷತ್ ಜ್ಞಾನ ಯಜ್ಞದಲ್ಲಿ ಪಾಲ್ಗೊಂಡು ಉಪನಿಷತ್ತಿನ ಸಾರಗಳನ್ನು ತಿಳಿದುಕೊಳ್ಳಬೇಕೆಂದು ಮನವಿ ಮಾಡಿದರು.
ತರುಣೋದಯ ಸಂಸ್ಕøತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್ ಮಾತನಾಡಿ, ಸಂಸ್ಥೆಯಿಂದ ಆ.3ರಿಂದ ಸೆ. 3ರವರೆಗೆ ನಗರದಲ್ಲಿ ಸಂಸ್ಕøತ ಮಾಸೋತ್ಸವ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ದಶಮಾನೋತ್ಸವ – ಕ್ರೀಡಾ- ಉಪನ್ಯಾಸವನ್ನು ನಗರದ ವಿವಿಧೆಡೆ ನಡೆಯುತ್ತಿದೆ. ಸೆ.3ರಂದು ಸಂಜೆ 4ರಿಂದ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಸಂಸ್ಕøತೋತ್ಸವದ ಮಹಾ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಪತ್ರಿಕಾಗೋಷ್ಥಿಯಲ್ಲಿ ಸಂಸ್ಕøತ ಭಾರತಿ ಜಿಲ್ಲಾ ಅಧ್ಯಕ್ಷ ಎನ್.ವಿ.ಶಂಕರನಾರಾಯಣ, ತರುಣೋದಯ ಸಂಸ್ಕøತ ಸೇವಾ ಸಂಸ್ಥೆ ಉಪಾಧ್ಯಕ್ಷ ಡಾ.ವಿಘ್ನೇಶ್ ಉಪಸ್ಥಿತರಿದ್ದರು.

ಬಾಕ್ಸ್:
ಆ. 22: ಬೃಹದಾರಣ್ಯಕೋಪನಿಷತ್, ಉಪನ್ಯಾಸಕರು: ಕುಷ್ಠಗಿ ವಾಸುದೇವ ಮೂರ್ತಿ
ಆ.23: ಐತೇರಿಯೋಪನಿಷತ್ ಉಪನ್ಯಾಸಕಾರರು: ವಿದ್ವಾನ್ ಮಹೀಪತಿ
ಆ.24: ಮಾಂಡಕ್ಯೋಪನಿಶತ್,ಉಪನ್ಯಾಸಕಾರರು:ವಿದ್ವಾನ್ ಹಂದಲಸು ರಾಘವೇಂದ್ರ ಭಟ್ಟ
ಆ.25: ಈಶಾವಾಸ್ಯ, ಉಪನ್ಯಾಸಕಾರರು: ವಿದ್ವಾನ್ ಹಂದಲಸು ವಾಸುದೇವ ಭಟ್ಟ
ಆ.26: ಕೇನೋಪನಿಷತ್, ಉಪನ್ಯಾಸಕರು ವಿದ್ವಾನ್ ಮಧುಸೂದನ ಆಡಿಗರು
ಆ. 27: ಪ್ರಶ್ನೋಪನಿಷತ್, ಉಪನ್ಯಾಸಕರು: ವಿದ್ವಾನ್ ಮಧುಸೂದನ ಆಡಿಗರು
ಆ.28: ಕಠೋಪನಿಷತ್, ಉಪನ್ಯಾಸಕರು: ವಿದ್ವಾನ್ ಹೆಚ್.ಆರ್.ವಾಸುದೇವ
ಆ: 29: ತೈತ್ತೀರಯಾ, ಉಪನ್ಯಾಸಕರು: ವಿನಾಯಕ ಎಮ್.ಎಸ್.
ಆ.30: ಛಾಂದೋಗ್ಯ, ಉಪನ್ಯಾಸಕರು: ವಿದ್ವಾನ್ ಅಚ್ಯುತ ಅವದಾನಿ
ಆ.31: ಮುಂಡಕೋಪನಿಷತ್, ಉಪನ್ಯಾಸಕರು: ವಿದ್ವಾನ್ ಡಾ.ಸನತ್ಕುಮಾರ:

Related posts

ಕಾರ್ಮಿಕರಿಗೆ ಕನಿಷ್ಠ ವೇತನ ಮರು ನಿಗದಿಗೆ ಹೈಕೋರ್ಟ್ ಸೂಚನೆ

8ನೇ ಖಂಡವನ್ನು ಪತ್ತೆಹಚ್ಚಿದ ವಿಜ್ಞಾನಿಗಳು: ಇದರ ವಿಶೇಷತೆ ಏನು…?

ಗಣಪತಿ ಮತ್ತು ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಒಟ್ಟಿಗೆ ಸೇರಿ ಆಚರಿಸೋಣ-ಶಾಸಕ ಎಸ್.ಎನ್. ಚನ್ನಬಸಪ್ಪ