ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮಹಿಳೆಯನ್ನು ಕೊಂದು ಭೀತಿ ಹುಟ್ಟಿಸಿದ್ದ ಚಿರತೆ ಸೆರೆ.

ಶಿವಮೊಗ್ಗ: ಮಹಿಳೆಯೊಬ್ಬರ್ನನು ಕೊಂದು ಜನರಲ್ಲಿ ಭಯ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ನಗರದ ಹೊರವಲಯದ ಬೀರನಕೆರೆ, ಬನ್ನೀಕೆರೆ, ಬಿಕ್ಕೋನಹಳ್ಳಿಗಳಲ್ಲಿ ಚಿರತೆಯೊಂದು ಹಳ್ಳಿಗಳಿಗೆ ನುಗ್ಗಿ ಜನರಲ್ಲಿ ಭಯ ಹುಟ್ಟಿಸಿತ್ತು. ಬಿಕ್ಕೋನಹಳ್ಳಿಯಲ್ಲಿ ಯಶೋಧಮ್ಮ ಎಂಬ ಮಹಿಳೆಯನ್ನು ಕೊಂದು ಹಾಕಿತ್ತು. ಅರಣ್ಯ ಇಲಾಖೆಯವರು ಅದನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು.
ಬನ್ನೀಕೆರೆಯಲ್ಲಿ ಹೊಲಕ್ಕೆ ಹೋಗಿದ್ದ ಯುವಕನೊಬ್ಬನಿಗೆ ಚಿರತೆ ಕಂಡಿತ್ತು. ತಕ್ಷಣ ಕಾರ್ಯೋನ್ಮುಖರಾದ ಅರಣ್ಯ ಇಲಾಖೆಯವರು ಬೋನನ್ನು ಸಿದ್ದಪಡಿಸಿದ್ದರು. ಕೊನೆಗೂ ಬಿಕ್ಕೋನಹಳ್ಳಿಯಲ್ಲಿ ನರಹಂತಕ ಚಿರತೆ ಬೋನಿಗೆ ಬಿದ್ದಿದೆ.
ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಇಲಾಖೆಯವರು ಲಯನ್ಸ್ ಸಫಾರಿಗೆ ಬಿಟ್ಟಿದ್ದಾರೆ. ಕೊನೆಗೂ ಆ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.

Related posts

 ಯಾರೂ ಬಿಜೆಪಿ ಬಿಟ್ಟು ಹೋಗಲ್ಲ:ಆ ರೀತಿ ಯಾವ ಬೆಳವಣಿಗೆ ಆಗಿಲ್ಲ. – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಕೇಸರಿ ಧ್ವಜ, ಬಂಟಿಂಗ್ಸ್ ಹಾಕಲು ನಿರ್ಬಂಧ ವಿಧಿಸಿಲ್ಲ- ಎಸ್ಪಿ ಮಿಥುನ್‍ ಕುಮಾರ್ ಸ್ಪಷ್ಟನೆ

ಇಸ್ರೇಲ್‌ ದಾಳಿ ಗಾಜಾ ಪಟ್ಟಿಯ 4 ಲಕ್ಷ ಜನ ವಲಸೆ: 5100ಕ್ಕೂ ಹೆಚ್ಚು ಜನ ಸಾವು…