ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕುವೆಂಪು ವಿವಿ ಜೊತೆ ಯೂಥ್ ಫಾರ್ ಸೇವಾ ಒಡಂಬಡಿಕೆ

ಶಿವಮೊಗ್ಗ:  ಯೂಥ್ ಫಾರ್ ಸೇವಾದ ಸಹಯೋಗದೊಂದಿಗೆ ನವೆಂಬರ್ ನಲ್ಲಿ ನಡೆಯಲಿರುವ 3 ದಿನಗಳ ನಿವಾಸಿ ಶಿಬಿರವನ್ನು ಕುವೆಂಪು ವಿವಿಯಿಂದ ಕಳೆದ 5 ವರ್ಷಗಳಲ್ಲಿ ಎನ್ಎಸ್ಎಸ್ ನಲ್ಲಿ ಅತ್ಯುತ್ತಮ ಸೇವಾ ವಿದ್ಯಾರ್ಥಿ ಪ್ರಶಸ್ತಿ ಪಡೆದ 30 ವಿದ್ಯಾರ್ಥಿಗಳೊಂದಿಗೆ ಶಿಬಿರವನ್ನು ನಡೆಸಬೇಕೆಂದು ಯೂಥ್ ಫಾರ್ ಸೇವಾ ಬೆಂಗಳೂರು ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಯೂಥ್ ಫಾರ್ ಸೇವಾದ ನಿರ್ಮಾತೃ ವೆಂಕಟೇಶ್ ಮೂರ್ತಿ ಜಿ, ಸ್ವ-ಗ್ರಾಮ ಫೆಲೋಶಿಪ್ ನ ಡಾ.ತಿಪ್ಪೇಶ್ ಸ್ವಾಮಿ, ಕುವೆಂಪು ವಿವಿಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಷಣ್ಮುಖ, ನಜೀರ್ ಸಾಬ್ ಅಧ್ಯಯನ ಪೀಠದ ಡಾ.ವೆಂಕಟೇಶ್, ಕುವೆಂಪು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಯಾದ ಡಾ.ನಾಗರಾಜ್ ಪರಿಸರ, ಯೂಥ್ ಫಾರ್ ಸೇವಾ ಬೆಂಗಳೂರಿನ ನೇತ್ರಾವತಿ, ರಾಘವೇಂದ್ರ, ಬಾಲಸುಬ್ರಮಣ್ಯ ಹಾಗೂ ಯೂಥ್ ಫಾರ್ ಸೇವಾ ಶಿವಮೊಗ್ಗದ ಮುಖ್ಯಸ್ಥರಾದ ಹರೀಶ್ ರವರು ಉಪಸ್ಥಿತರಿದ್ದರು.

Related posts

ರೈಲು ಬೋಗಿಯಲ್ಲಿ ಅಗ್ನಿ ಅವಘಡ: 10 ಮಂದಿ ಪ್ರಯಾಣಿಕರು ಸಾವು: 20ಕ್ಕೂ ಹೆಚ್ಚು ಮಂದಿಗೆ ಗಾಯ.

ಸಾಮಾನ್ಯ ಜನರ ಜೀವನಕ್ಕೆ ಸರ್ಕಾರದ ಸಹಕಾರ ‘ಗೃಹಲಕ್ಷ್ಮಿ ಯೋಜನೆ -ಸಚಿವ ಎಸ್ .ಮಧು ಬಂಗಾರಪ್ಪ

2029ರ ವೇಳೆಗೆ ಒಂದು ರಾಷ್ಟ್ರ, ಒಂದು ಚುನಾವಣೆ ನಡೆಸಬಹುದು – 22 ನೇ ಕಾನೂನು ಆಯೋಗ.