ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ರೈಲ್ವೆ ಅಂಡರ್ ಪಾಸ್ ಲೋಕಾರ್ಪಣೆ ಮಾಡಿದ ಸಂಸದ ಬಿ.ವೈ. ರಾಘವೇಂದ್ರ.

ಶಿವಮೊಗ್ಗ: ನಗರದ ವಿನೋಬನಗರದ ಪಿಎನ್‍ಟಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ ಅನ್ನು ಸಂಸದ ಬಿ.ವೈ. ರಾಘವೇಂದ್ರ ಲೋಕಾರ್ಪಣೆ ಮಾಡಿದರು.
ಟ್ರಾಫಿಕ್ ದಟ್ಟಣೆ ನಿವಾರಣೆಗಾಗಿ ಪಿಎನ್‍ಟಿ ಕಾಲೋನಿ ಹಾಗೂ ಅಕ್ಕಪಕ್ಕದ ಬಡಾವಣೆಯ ಜನರಿಗೆ ರೈಲ್ವೆ ಗೇಟ್ ಮುಚ್ಚಿದ ಸಂದರ್ಭದಲ್ಲಿ ಓಡಾಡಲು ಕಷ್ಟವಾಗುತ್ತಿತ್ತು. ಮತ್ತು ಜನನಿಬಿಡ ಪ್ರದೇಶವಾದ್ದರಿಂದ ರೈಲು ಓಡಾಡುವ ಸಂದರ್ಭದಲ್ಲಿ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗುತ್ತಿತ್ತು. ಸಂಸದರ ಅವಿರತ ಪ್ರಯತ್ನದಿಂದ ದಾಖಲೆ ಸಮಯದಲ್ಲಿ ಈ ಅಂಡರ್‍ಪಾಸ್ ನಿರ್ಮಾಣ ಕಾಮಗಾರಿ ಮುಗಿದಿದ್ದು ಇಂದು ಲೋಕಾರ್ಪಣೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಎಸ್. ದತ್ತಾತ್ರಿ, ಮಾಲತೇಶ್, ಸುನೀತಾ ಅಣ್ಣಪ್ಪ, ಇ. ವಿಶ್ವಾಸ್, ಸುಮಿತ್ರಾ, ವಿ.ರಾಜು, ಚಿನ್ನಪ್ಪ, ಆಶಾಚಂದ್ರಪ್ಪ ಹಾಗೂ ಬಡಾವಣೆಯ ನಿವಾಸಿಗಳು ಹಾಜರಿದ್ದರು.

Related posts

ಸಾಹಿತ್ಯದ ಓದು ಬರಹ ಆತ್ಮಸ್ಥೈರ್ಯ ತುಂಬಲಿದೆ-ಡಿ.ಮಂಜುನಾಥ

ಚಂದ್ರಯಾನ ಯಶಸ್ವಿಯಾಗಲು ಶಿವಮೊಗ್ಗ ಯೋಗಪಟುಗಳ ಶುಭಹಾರೈಕೆ

ಅರ್ಧಕ್ಕೆ ಶಾಲೆ ಬಿಟ್ಟು ತಿಂಗಳಿಗೆ ಕೇವಲ 8 ಸಾವಿರ ರೂ. ದುಡಿಯುತ್ತಿದ್ದ ವ್ಯಕ್ತಿ ಈಗ ದೇಶದ ಅತ್ಯಂತ ಕಿರಿಯ ಬಿಲಿಯನೇರ್