ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಈ ವರ್ಷವೂ ಮ್ಯಾಮ್ ಕೋಸ್ ಲಾಭಾಂಶದಲ್ಲಿ ವೃದ್ಧಿ- ಸಂಸ್ಥೆ ಉಪಾಧ್ಯಕ್ಷ ಮಹೇಶ್ ಎಚ್.ಎಸ್.

ಶಿವಮೊಗ್ಗ : ಈ ವರ್ಷವೂ ಮ್ಯಾಮ್ ಕೋಸ್ ಲಾಭಾಂಶದಲ್ಲಿ ವೃದ್ಧಿಯಾಗಿದ್ದು, μÉೀರುದಾರರಿಗೂ ಸೌಲಭ್ಯ ಮುಂದುವರಿಸಲಾಗುತ್ತಿದೆ ಎಂದು ಸಂಸ್ಥೆ ಉಪಾಧ್ಯಕ್ಷ ಮಹೇಶ್ ಎಚ್.ಎಸ್. ಹೇಳಿದರು.
ಎಪಿಎಂಸಿ ಆವರಣದಲ್ಲಿನ ಮ್ಯಾಮ್ ಕೋಸ್ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ μÉೀರುದಾರರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷ 3.91 ಕೋಟಿ ಲಾಭ ಗಳಿಸಿದ್ದು, ಈ ಬಾರಿ 4.41 ಲಕ್ಷ ರೂ. ಲಾಭಗಳಿಸಿದೆ. 404 ಕೋಟಿ ರೂ. ಹೆಚ್ಚುವರಿ ವ್ಯವಹಾರ ಮಾಡಲಾಗಿದೆ ಎಂದರು.
ಗರಿಷ್ಠ ಕಟಾವು ಸಾಲ 2 ಲಕ್ಷ ರೂ., ಔಷಧ ಸಿಂಪಡಣೆ ಸಾಲ 50 ಸಾವಿರ ರೂ. ವರೆಗೆ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಠೇವಣಿ ಇಟ್ಟ μÉೀರುದಾರರಿಗೆ ಗರಿಷ್ಠ 10 ಲಕ್ಷ ರೂ. ವರೆಗೆ ಸಾಲ ನೀಡಲಾಗುತ್ತದೆ. ಸಂಸ್ಥೆಗೆ ಅಡಿಕೆ ಹಾಕಿದವರಿಗೆ ಒಟ್ಟರೆ ಅಡಿಕೆಯಲ್ಲಿ ಶೇ. 60 ರಷ್ಟು ಮುಂಗಡ ನೀಡಲಾಗುತ್ತದೆ ಎಂದರು.
ಈ ಬಾರಿ 1216 μÉೀರುದಾರರು ಹೆಚ್ಚಳವಾಗಿದ್ದಾರೆ. ಅಡಿಕೆ ಆಮದು ದರ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಕೇಂದ್ರ ಆಮದು ದರ ಹೆಚ್ಚಳ ಮಾಡಿದೆ. ರಫ್ತು ದರ ಹೆಚ್ಚಳಕ್ಕೆ ಕೂಡ ಕೇಂದ್ರ ಸ್ಪಂದಿಸಿದೆ. ಆದರೆ ಜಿಎಸ್ ಟಿ ಕಡಿಮೆ ಮಾಡುವಂತೆ ಕೋರಲಾಗಿತ್ತು. ಇದು ಕಡಿಮೆಯಾಗಿಲ್ಲ ಎಂದರು.
ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬುದನ್ನು ಸಾಬೀತು ಮಾಡಲು ಸಂಶೋಧನೆ ನಡೆಸುವಂತೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಸಂಶೋಧನಾ ಸಂಸ್ಥೆಗೆ ವಹಿಸಲಾಗಿತ್ತು. ಸಂಶೋಧನೆಯಲ್ಲಿ ಆಶಾದಾಯಕ ವರದಿ ಬಂದಿದೆ. ಅಡಿಕೆಯಲ್ಲಿ ಔಷಧೀಯ ಗುಣವಿದೆ ಎಂಬುದನ್ನು ಪತ್ತೆ ಮಾಡಿದೆ. ಸುಪ್ರೀಂ ಕೋರ್ಟ್ ಕೇಳಿದಾಗ ಕೇಂದ್ರದ ಮೂಲಕ ಸಲ್ಲಿಸಲಾಗುತ್ತದೆ ಎಂದರು.
ಸಭೆಯಲ್ಲಿ ಸದಸ್ಯರಾದ ನರೇಂದ್ರ, ದಿನೇಶ್ ಬರ್ಧಳ್ಳಿ, ಬಡಿಯಣ್ಣ, ಜೈವೇಲು, ವಿಠಲಶೆಟ್ರು, ವಿರೂಪಾಕ್ಷಪ್ಪ, ರತ್ನಾಕರ್, ಶಾಸಕ ಎಸ್.ಎನ್. ಚನ್ನಬಸಪ್ಪ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಮೊದಲಾದವರು ಇದ್ದರು.

Related posts

ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ – ಸಿಎಂ ಸಿದ್ದರಾಮಯ್ಯ 

ಮಹಿಳೆಯರ ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮಿ ಆಸರೆ- ಗ್ರಾಪಂ ಅಧ್ಯಕ್ಷೆ ಚೈತ್ರ ಮೋಹನ್

ರಾಜ್ಯದ ಎಲ್ಲಾ ನಗರದಲ್ಲಿ ಶೌಚಾಲಯ; ಹೈಕೋರ್ಟ್ ಗೆ ಸರ್ಕಾರ ಅಫಿಡವಿಟ್ ಸಲ್ಲಿಕೆ…