ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಭೌದ್ಧಿಕ ಅಸಾಮರ್ಥ್ಯದ ಮಕ್ಕಳ ಬಗ್ಗೆಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ- ನಟರಾಜ್ ಭಾಗವತ್

ಶಿವಮೊಗ್ಗ: ಭೌದ್ಧಿಕ ಅಸಾಮರ್ಥ್ಯದ ಮಕ್ಕಳು ಜನಿಸದಂತೆಯೇ ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಹೇಳಿದರು.
ಅವರು ಇಂದು ಸ್ಪೆಷಲ್ ಓಲಿಂಪಿಕ್ಸ್ ಭಾರತ್ ಕರ್ನಾಟಕ, ಸಕ್ಷಮ, ಮನಸ್ಫೂರ್ತಿ, ಸರ್ಜಿ ಫೌಂಡೇಷನ್, ಕ್ರೀಡಾಭಾರತಿ, ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಾತಾ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಬೌದ್ಧಿಕ ಅಸಮರ್ಥ ಮಕ್ಕಳ ಫ್ಲೋರ್ ಬಾಲ್ ಆಟದ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಹಲವು ಕಾರಣಗಳಿಂದ ಬೌದ್ಧಿಕ ಅಸಮರ್ಥ ಮಕ್ಕಳು ಜನಿಸುತ್ತಿದ್ದಾರೆ. ಆದರೆ ಈ ರೀತಿಯ ಜನನ ಸಂಖ್ಯೆಯನ್ನು ತಡೆಗಟ್ಟಬಹುದು. ಮಹಿಳೆಯರು ಗರ್ಭಿಣಿಯಾಗಿರುವಾಗಲೇ ಪೌಷ್ಠಿಕ ಆಹಾರ ನೀಡುವ ಮೂಲಕ ಮತ್ತು ವಿಶೇಷ ಚಿಕಿತ್ಸೆಗ ಮೂಲಕ ಇಂತಹ ಮಕ್ಕಳ ಜನನ ಸಂಖ್ಯೆ ಕಡಿಮೆ ಮಾಡಬಹುದಾಗಿದೆ ಎಂದರು.
ಆದರೂ ಕೂಡ ಇಂತಹ ಮಕ್ಕಳ ಬಗ್ಗೆ ನಮ್ಮ ಸಮಾಜ ಅತ್ಯಂತ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಅನುಕಂಪಕ್ಕಿಂತ ನೆರವು ಮುಖ್ಯ. ಈ ಹಿನ್ನೆಲೆಯಲ್ಲಿ ಕೇವಲ ಓದು ಮುಂತಾದ ಚಟುವಟಿಕೆಗಳಿಗಿಂತ ಕ್ರೀಡೆಗಳ ಮೂಲಕ ಆ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸಬಹುದಾಗಿದೆ. ಭಾರತ ಈಗಾಗಲೇ ಕ್ರೀಡಾಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದೆ. ವಿಕಲಚೇತನರ ಕ್ರಿಡೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹ ಸಿಗುತ್ತಿದೆ. ಇದು ಸ್ವಾಗತಾರ್ಹ ಎಂದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಸರ್ಜಿ ಫೌಂಡೇಷನ್ನಿನ ಡಾ. ಧನಂಜಯ ಸರ್ಜಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಅದರಲ್ಲೂ ವಿಶೇಷ ಚೇತನರಿಗೆ ಪ್ರತಿಭೆ ದೇವರು ಕೊಟ್ಟ ವರವಾಗಿದೆ. ಆದರೆ ನಮ್ಮ ಸಮಾಜ ಅವರನ್ನು ಕೀಳರಿಮೆಯಿಂದ ನೋಡಬಾರದು. ಇಂತಹ ಮಕ್ಕಳು ಕ್ರೀಡೆಗಳಲ್ಲೂ ಭಾಗವಹಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ ಎಂದರು.
ಕ್ರೀಡೆ ಎಂದರ ಎಲ್ಲರೂ ಪ್ರಥಮ ಸ್ಥಾನ ಪಡೆಯಲು ಸಾಧ್ಯವಿಲ್ಲ. ಆದರೆ ಆ ಸ್ಥಾನಕ್ಕಾಗಿ ಕ್ರೀಡಾ ಮನೋಭಾವದ ಸ್ಪರ್ಧೆ ಇರಬೇಕು. ಈ ಹಿನ್ನೆಲೆಯಲ್ಲಿ ತರಬೇತಿ ಶಿಬಿರಗಳು ಅವರ ಮನೋಸ್ಥೈರ್ಯ ಹೆಚ್ಚಿಸುತ್ತವೆ. ಸಮಾಜ ಅವರಿಗೆ ಅನುಕಂಪ ತೋರಿಸುವ ಬದಲು ಅವಕಾಶ ಮಾಢಿಕೊಡಬೇಕು ಎಂದರು.
ಕಾರ್ಯಕ್ರದಲ್ಲಿ ಪ್ರಮುಖರಾದ ಡಾ. ರಜನೀ ಪೈ, ಡಾ. ನಾಗರಾಜ್, ರವೀಂದ್ರಕುಮಾರ್ ಕೆ., ಡಿ.ಎಸ್. ನಟರಾಜ್, ಎ. ಮಂಜುನಾಥ್, ಐರಿನ್ ಕಾರ್ಕಡ್, ಶಾಂತಲಾ ಮುಂತಾದವರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇತ್ರತಜ್ಞ ಡಾ. ಪ್ರಶಾಂತ್ ಇಸ್ಲೂರ್ ವಹಿಸಿದ್ದರು. ಅಮರೇಂದ್ರ ಅಂಜನಪ್ಪ ಪ್ರಾಸ್ತಾವಿಕ ಮಾತನಾಡಿದರು.

Related posts

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ.

ಜೆಡಿಎಸ್ ವತಿಯಿಂದ ನ.22ರಂದು ಪ್ರತಿಭಟನಾ ಮೆರವಣಿಗೆ.

ನ.17ರಿಂದ 25ರವರೆಗೆ ಅಂತರರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ