ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿವಿಧ ಪಂದ್ಯಾವಳಿಗಳಲ್ಲಿ ನಿದಿಗೆ-ಬಿ.ಬೀರನಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಂದ ಅತ್ಯುತ್ತಮ ಪ್ರದರ್ಶನ: ಅಭಿನಂದನೆ.

ಶಿವಮೊಗ್ಗ: ಇತ್ತೀಚೆಗೆ ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ ಶಾಲಾ ಬಾಲಕರು, ಬಾಲಕಿಯರ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ನಿದಿಗೆ-ಬಿ.ಬೀರನಹಳ್ಳಿ ಸರ್ಕಾರಿ ಶಾಲೆ ಮಕ್ಕಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 600 ಮೀಟರ್ ರಿಲೇ ಓಟದಲ್ಲಿ ದ್ವಿತೀಯ, 400 ಮೀಟರ್ ರಿಲೇ ಓಟದಲ್ಲಿ ದ್ವಿತೀಯ, 100 ಮತ್ತು 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 200 ಮೀಟರ್ ಓಟದಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ. ಖೋಖೋದಲ್ಲಿ ಪ್ರಥಮ, ವಾಲಿಬಾಲ್ ದ್ವಿತೀಯ, ರಿಲೇ ಯಲ್ಲಿ ಪ್ರಥಮ ಥ್ರೋಬಾಲ್ ನಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಬಾಲಕರ ವಿಭಾಗದಲ್ಲಿ ಖೋಖೋದಲ್ಲಿ ಪ್ರಥಮ, ಥ್ರೋಬಾಲ್ ನಲ್ಲಿ ದ್ವಿತೀಯ, 100 ಮತ್ತು 200 ಮೀಟರ್ ನಲ್ಲಿ ದ್ವಿತೀಯ,ರಿಲೇಯಲ್ಲಿ ಪ್ರಥಮ, ತಟ್ಟೆ ಎಸತದಲ್ಲಿ ಪ್ರಥಮ, 600 ಮತ್ತು 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ದೊರೆತಿದೆ. ಉತ್ತಮ ಸಾಧನೆ ನಡೆಸಿದ ಬಾಲಕ ಮತ್ತು ಬಾಲಕಿಯರಿಗೆ ಸಮಗ್ರ ಪ್ರಶಸ್ತಿ ಲಭಿಸಿದೆ.
ಸಾಧನೆ ತೋರಿದ ಮಕ್ಕಳಿಗೆ ಎಸ್‍ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ನಿದಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Related posts

ಅನ್ನಭಾಗ್ಯ’ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್:

ಆದಿವಾಸಿ ಸಮುದಾಯದ ಪುನರುಜ್ಜೀವನಕ್ಕೆ ಬಿರ್ಸಾಮುಂಡಾ ಅವರ ಕೊಡುಗೆ ಮಹತ್ವದ್ದು – ಶಾಸಕ ತಮ್ಮಯ್ಯ

ನಾಳೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಗ್ರಾಪಂ ಅಧ್ಯಕ್ಷೆ ಚೈತ್ರಾ ಕೆ.ಆರ್.ಮೋಹನ್