ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಇನ್ಮುಂದೆ ಮಕ್ಕಳು ಮುಟ್ಟಿದ್ರೆ ಓಪನ್ ಆಗಲ್ಲ ಮೊಬೈಲ್ ಫೋನ್ ಗಳು..!

ಬೆಂಗಳೂರು: ತಂತ್ರಜ್ಞಾನ ಡಿಜಿಟಲ್ ಮಾಧ್ಯಮ ಬೆಳದಂತೆ  ಈಗ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಮೊಬೈಲ್ ಬಳಕೆ ತಿಳಿದಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಫೋನ್ ಗಳಿಗೆ ಹೆಚ್ಚು ಹೆಚ್ಚು ಅಡಿಕ್ಟ್ ಆಗಿದ್ದಾರೆ. ಕನಿಷ್ಠ 93% ಮಕ್ಕಳು ಮೊಬೈಲ್ ಗಳಲ್ಲೇ ಆಟಗಳನ್ನು ಆಡಲು ಬಯಸುತ್ತಾರೆ. ಹೀಗಾಗಿ ಅವರು ಹೊರಾಂಗಣ ಆಟಗಳನ್ನು ಆಡಲು ಇಷ್ಟಪಡುವುದಿಲ್ಲ ಎಂದು ಸಮೀಕ್ಷೆಯೊಂದು ಕಂಡುಹಿಡಿದಿದೆ.

ಈ ನಡುವೆ ಮಕ್ಕಳ ಮೊಬೈಲ್ ಚಟಕ್ಕೆ ಕಡಿವಾಣ ಹಾಕಲು ರಾಜ್ಯ ಮಕ್ಕಳ ಆಯೋಗದವರು ಮುಂದಾಗಿದ್ದು, ಮಕ್ಕಳು ಮೊಬೈಲ್ ಮುಟ್ಟಿದರೆ ಅದು ಓಪನ್ ಆಗದೇ ಇರುವ ರೀತಿಯಲ್ಲಿ ಬೇಕಾಗಿರುವ ಆಪ್ ಅನ್ನು ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗೇಶ್ ಶೀಘ್ರದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು, ಈ ನಿಟ್ಟಿನಲ್ಲಿ ನಾವು ಇನ್ಫೋಸಿಸ್ ಜೊತೆಗೆ ಮಾತನಾಡಿದ್ದೇವೆ. ಇದಲ್ಲದೇ ಮನಶಾಸ್ತ್ರ್ರ ಜೊತೆಗೆ ಕೂಡ ಚರ್ಚೆ ನಡೆಸುತ್ತಿದ್ದೇವೆ ಅಂತ ತಿಳಿಸಿದ್ದಾರೆ.

ಈ ಮಧ್ಯೆ ಮಕ್ಕಳ ತಾಯಂದಿರು ತಮ್ಮ ಮಕ್ಕಳಲ್ಲಿನ ವ್ಯಸನಕ್ಕೆ ಕಾರಣ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಸಮೀಕ್ಷೆಯ ಪ್ರಕಾರ, ಸುಮಾರು 55 ಪ್ರತಿಶತದಷ್ಟು ಪೋಷಕರು ತಮ್ಮ 9 ರಿಂದ 13 ವರ್ಷದ ಮಕ್ಕಳು ಬಹುತೇಕ ಇಡೀ ದಿನ  ಮೊಬೈಲ್ ಫೋನ್ ಪ್ರವೇಶವನ್ನು ಹೊಂದಿದ್ದಾರೆ ಎಂದು ಒಪ್ಪಿಕೊಂಡರೆ, 13 ರಿಂದ 17 ವರ್ಷದ ಮಕ್ಕಳೊಂದಿಗೆ ಪ್ರತಿಕ್ರಿಯಿಸಿದವರಲ್ಲಿ 71 ಪ್ರತಿಶತದಷ್ಟು ಜನರು ತಮ್ಮ ಮಕ್ಕಳು ಇಡೀ ದಿನ ಸ್ಮಾರ್ಟ್ಫೋನ್ ಹೊಂದಿದ್ದಾರೆ ಎಂದು ಹೇಳುತ್ತಾರೆ.

ಹೀಗಾಗಿ ಮಕ್ಕಳ ಮೊಬೈಲ್ ಚಟಕ್ಕೆ ಬ್ರೇಕ್ ಹಾಕಲು  ಆ್ಯಪ್ ಮೂಲಕ ರಾಜ್ಯ ಮಕ್ಕಳ ಆಯೋಗ ಮುಂದಾಗಿದೆ.

 

Related posts

ಶಿವಮೊಗ್ಗದ ಪಶು ವೈದ್ಯಕೀಯ ಕ್ರೀಡಾಪಟುಗಳು: 17ನೇ ಅಂತರ್ ರಾಜ್ಯಮಟ್ಟದ ಕ್ರೀಡಾಕೂಟಲ್ಲಿ ಉತ್ತಮ ಸಾಧನೆ

ಆಂಧ್ರ ರಾಜಕಾರಣದಲ್ಲಿ ಸ್ಪೋಟಕ ತಿರುವು: ಟಿಡಿಪಿ ಜತೆ ಜನಸೇನೆ ಮೈತ್ರಿ ಘೋಷಿಸಿದ ಪವನ್ ಕಲ್ಯಾಣ್.

ಹುಲಿ ಉಗುರು ಪ್ರಕರಣ:  ನಟ ಹಾಗೂ ಸಂಸದ ಜಗ್ಗೇಶ್ ಗೆ ರಿಲೀಫ್