ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಜಗತ್ತಿನ ಎಲ್ಲಾ ಧರ್ಮಗಳೂ ಶಾಂತಿಯನ್ನೇ ಬೋಸುತ್ತವೆ-ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಶಿವಮೊಗ್ಗ: ಜಗತ್ತಿನ ಎಲ್ಲಾ ಧರ್ಮಗಳೂ ಶಾಂತಿಯನ್ನೇ ಬೋಸುತ್ತವೆ. ಪ್ರತಿಯೊಬ್ಬರ ಮನಸ್ಸು ಶಾಂತವಾಗಿದ್ದರೆ ಇಡೀ ವಿಶ್ವವೇ ನೆಮ್ಮದಿಯಾಗಿರುತ್ತದೆ ಎಂದು ಬೆಂಗಳೂರು ಚಿನ್ಮಯ ಮಿಷನ್‍ನ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸ್ವಾಮಿ ಚಿನ್ಮಯಾನಂದರ 108ನೇ ಜಯಂತಿ ಅಂಗವಾಗಿ ಚಿನ್ಮಯ ಮಿಷನ್ ಸ್ಥಳೀಯ ಘಟಕದ ವತಿಯಿಂದ ನಗರದ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಹಿಂದು, ಜೈನ, ಬೌದ್ಧ, ಪಾರ್ಸಿ, ಕ್ರೈಸ್ತ, ಇಸ್ಲಾಂ ಸೇರಿದಂತೆ ಎಲ್ಲಾ ಧರ್ಮಗಳ ಉದ್ದೇಶವೂ ಶಾಂತಿಯೇ ಆಗಿದೆ. ಜನರ ಮನಸ್ಸು ಶುದ್ಧವಾಗಿದ್ದರೆ, ಆಸೆಗಳಿಂದ ವಿಮುಖವಾಗಿದ್ದರೆ, ಎಲ್ಲರೂ ಸಮಾನರೆಂಬ ಭಾವನೆ ಮೂಡಿದರೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದರು.
ಸಾಧನೆಯ ಮಾರ್ಗಕ್ಕೆ ಮನಸ್ಸು ಶುದ್ಧವಾಗಿರಬೇಕು. ಚಂಚಲತೆ, ನೂರಾರು ವಿಷಯಗಳು ಮನಸ್ಸಿನಲ್ಲಿ ತುಂಬಿಕೊಂಡಿದ್ದರೆ, ಗೊಂದಲಗಳಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಇದನ್ನು ಭಗವದ್ಗೀತೆಯಲ್ಲಿ ಸವಿಸ್ತಾರವಾಗಿ ಹೇಳಲಾಗಿದೆ. ಮನಸ್ಸಿನ ಕಲ್ಮಶವನ್ನು ತೆಗೆದಾಗ ಮಾತ್ರ ಸಾಧನೆ ಸಾಧ್ಯವೆಂದರು.

ಪ್ರತಿಯೊಬ್ಬರ ಜೀವನದಲ್ಲಿಯೂ ಪೆಟ್ಟು ಬೀಳುತ್ತದೆ. ಪೆಟ್ಟು ತಿನ್ನದೆ ಇರುವ ವ್ಯಕ್ತಿ ಇರಲು ಸಾಧ್ಯವೇ ಇಲ್ಲಘಿ. ಅಂತಹ ಪೆಟ್ಟುಗಳಿಗೆ ಹೆದರದೆ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಇಲ್ಲದ ಕಷ್ಟ ನನಗೆ ಬಂದಿದೆ ಎಂದು ಭಾವಿಸಬಾರದು. ನಮಗಿಂತಲೂ ಹೆಚ್ಚನ ಕಷ್ಟ ಅನುಭವಿಸುವವರು ಇದ್ದಾರೆ ಎಂದರು.
ಭರತ ಖಂಡದಲ್ಲಿ ವೇದ ವ್ಯಾಸರ ಕಾಲದಿಂದಲೂ ಜ್ಞಾನ ಪರಂಪರೆ ಬೆಳೆದುಕೊಂಡು ಬಂದಿದೆ. ಈ ಪರಂಪರೆ ಮುಂದುವರಿದುಕೊಂಡು ಹೋಗಬೇಕಾದರೆ ಅಧ್ಯಾತ್ಮ ಅತೀ ಮುಖ್ಯವಾಗಿದೆ. ಯೋಗದ ಮೂಲಕ ಮನಸ್ಸು ನಿಗ್ರಹಿಸಿಕೊಂಡು ತಳಮಳದಿಂದ ದೂರವಿರಬೇಕೆಂದು ಹೇಳಿದರು.
ಮನಸ್ಸು ತಳಮಳಗೊಂಡು ವಿಷಮತ್ವಕ್ಕೆ ಹೋದಾಗ ಅದನ್ನು ನಿಗ್ರಹಿಸಲು ಯೋಗ ಸಹಕಾರಿಯಾಗಲಿದೆ. ಮನಸ್ಸು ಶುದ್ಧಿಗಾಗಿ ಭಗವದ್ಗೀತೆ ಓದಬೇಕಿದೆ. ದೇವಸ್ಥಾನಗಳು ಮನಸ್ಸು ಶುದ್ಧ ಮಾಡುವ, ಮನದ ಕೊಳೆ ತೆಗೆಯುವ ಕೇಂದ್ರಗಳಾಗಬೇಕಿದೆ.ಆಗ ಮಾತ್ರ ಸಮಾಜದಲ್ಲಿ ದೊಡ್ಡ ಪರಿವರ್ತನೆಯಾಗಲಿದೆ ಎಂದರು.
ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಚಿನ್ಮಯ ಮಿಷನ್ ನಗರದಲ್ಲಿ ಆರಂಭವಾಗಿ ಉತ್ತಮ ಕೆಲಸ ಮಾಡಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಸಕ್ರಿಯವಾಗಿರಲಿಲ್ಲ. ಈ ವರ್ಷದಿಂದ ಚಟುವಟಿಕೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಚಿನ್ಮಯ ಮಿಷನ್ ಆರಂಭವಾಗಿ ಕೋಟ್ಯಂತರ ಜನರಿಗೆ ಭಗವದ್ಗೀತೆಯನ್ನು ಹೇಳಿಕೊಡುವ ಕೆಲಸ ಮಾಡುತ್ತಿದೆ. ಮಕ್ಕಳಲ್ಲಿ ವೌಲ್ಯ ಬೆಳೆಸುವ ಸಲುವಾಗಿ ಭಗವದ್ಗೀತೆಯನ್ನು ಹೇಳಿ ಕೊಡಲಾಗುತ್ತದೆ. ವಾರದಲ್ಲಿ ಒಂದು ಗಂಟೆ ಕಾಲ ಭಗವದ್ಗೀತೆ ಹೇಳಿ ಕೊಡುವ ಮೂಲಕ ವ್ಯಕ್ತಿತ್ವ ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳಿಗೆ ಮಾತ್ರವಲ್ಲ ಎಲ್ಲಾ ವಯೋಮಾನದವರಿಗೂ ಸಂಸ್ಕಾರ ಹೇಳಿಕೊಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಮತಾನಂದಾ ಮಾತಾಜಿ, ಗುರುವಂದನಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಅವಧಾನಿ, ಕುಮಾರಶಾಸ್ತ್ರಿ, ಎಂ.ಡಿ. ಕೃಷ್ಣಮೂರ್ತಿ ಮೊದಲಾದವರು ಇದ್ದರು.
ಒಂದು ಸಾವಿರ ಭಕ್ತರಿಂದ ಸಾಮೂಹಿಕ ಸ್ತೋತ್ರ ಹಾಗೂ ಅμÉ್ಟೂೀತ್ತರ ಶತ ನಾಮಾವಳಿ ಪಠಣ ನಡೆಯಿತು.

Related posts

ಎನ್ಇಎಸ್‌ ಸಂಸ್ಥೆಗೆ ಟಾಟಾ ಗ್ರೀನ್‌ ಚಾಂಪಿಯನ್‌ ಪ್ರಶಸ್ತಿ

ಚಂದ್ರಯಾನ ಯಶಸ್ಸಿಗೆ ವಾಣಿಜ್ಯ ಕೈಗಾರಿಕಾ ಸಂಘ ಅಭಿನಂದನೆ

ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಘೆಗೆ ಹೋಲಿಸಿ ವಿವಾದ ಸೃಷ್ಠಿಸಿದ ತಮಿಳುನಾಡು ಎಂ.ಕೆ. ಸ್ಟಾಲಿನ್​ ಪುತ್ರ ಉದಯನಿಧಿ ಸ್ಟಾಲಿನ್​.