ಕನ್ನಡಿಗರ ಪ್ರಜಾನುಡಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಲೋ ಬಿಪಿಯಿಂದ ಹೃದಯಾಘಾತವಾಗಿ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಸಾವು.

 

ದಕ್ಷಿಣ ಕನ್ನಡ:  ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಲೋ ಬಿಪಿಯಿಂದ ಹೃದಯಾಘಾತವಾಗಿ ನರ್ಸಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾ(19) ಮೃತ ವಿದ್ಯಾರ್ಥಿನಿ. ಸುಮಾ ಮಂಗಳೂರಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದರು. ಆನಾರೋಗ್ಯ ಹಿನ್ನೆಲೆ ಆಗಸ್ಟ್ 9 ರಂದು ಸುಮಾ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದರು.

ನಂತರ ಮತ್ತೆ ಆಗಸ್ಟ್.11 ರಂದು ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಆಗಸ್ಟ್ 13 ರ ಸಂಜೆ ಸುಮಾ ಮತ್ತೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Related posts

ಪೊಲೀಸ್ ಇಲಾಖೆಗೆ ಬೆಲೆ ಬಾಳುವ ವಸ್ತುಗಳ ದೇಣಿಗೆ.

 ಲಾರಿ ಮತ್ತು ಟಾಟಾ ಸುಮೊ ನಡುವೆ ಭೀಕರ ಅಪಘಾತ: 12 ಮಂದಿ ದುರ್ಮರಣ.

ಬಿವೈ ವಿಜಯೇಂದ್ರರನ್ನ ಅಳೆದು ತೂಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ- ಅರವಿಂದ ಲಿಂಬಾವಳಿ.