ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ದೇವಸ್ಥಾನಕ್ಕೆ ಯಾಕೆ ಕೋರ್ಟ್ ​ಗೆ ಹೋಗೋಣ ಬನ್ನಿ-  ಸಚಿವ ಪ್ರಿಯಾಂಕ್ ಖರ್ಗೆ  ಸವಾಲು.

ಕಲಬುರಗಿ:   ಗುತ್ತಿಗೆದಾರರ ಬಳಿ ಕಮಿಷನ್ ಗೆ ಬೇಡಿಕೆ ಇಟ್ಟಿಲ್ಲ ಎಂದು ದೇವರ ಬಳಿ ಪ್ರಮಾಣ ಮಾಡಲಿ ಎಂದು ಹೇಳಿದ್ದ ಬಿಜೆಪಿ ನಾಯಕರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಯಾರು ನಂಬುತ್ತಾರೆ ಅವರು ಆಣೆ ಪ್ರಮಾಣ ಮಾಡುತ್ತಾರೆ. ಬಿಜೆಪಿಯವರು ಕೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ. ನಾವು ಹಗರಣಗಳ ಬಗ್ಗೆ ಸಾಕ್ಷಿ ಇಟ್ಟು ಮಾತನಾಡಿದ್ದೇವು. ಪ್ರಮಾಣ ಮಾಡಿ ಏನು ಮಾಡುವುದು ಇದೆ. ದೇವಸ್ಥಾನಕ್ಕೆ ಯಾಕೆ ಕೋರ್ಟ್​ಗೆ ಹೋಗೋಣ ಬನ್ನಿ ಎಂದು ಸವಾಲು ಹಾಕಿದರು.

ಸಂವಿಧಾನವಿದೆ, ಕಾನೂನು ಇದೆ ಅದನ್ನು ಬಿಟ್ಟು ಈ ದೇವಸ್ಥಾನಕ್ಕೆ ಬನ್ನಿ, ಆ ದೇವಸ್ಥಾನಕ್ಕೆ ಬನ್ನಿ ಅಂದರೆ ಜನರಿಗೆ ಅದರಿಂದ ನೆಮ್ಮದಿ ಸಿಗುತ್ತಾ ಎಂದು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ,  ನ್ಯಾಯ ಕೊಡಿಸಬೇಕು ಅಂದರೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ನಾವು ಹೇಗೆ ದಾಖಲೆ ಇಟ್ಟು ಕೋರ್ಟ್ ಗೆ ಹೋಗಿದ್ದೇವೋ ಅದೇ ರೀತಿ ಬಿಜೆಪಿ ದಾಖಲೆ ಇಟ್ಟುಕೊಂಡು ಕೋರ್ಟ್​ಗೆ ಹೋಗಲಿ ಎಂದು ಟಾಂಗ್ ನೀಡಿದರು.

Related posts

ಮೊಬೈಲ್ ಬಳಕೆದಾರರಿಗೊಂದು ಸಲಹೆ: ಸ್ಮಾರ್ಟ್ ಫೋನ್ ನಿಂದ ಬರುವ ಈ ಅಪಾಯಕಾರಿ ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ..!

ಶಾಲೆಯ ಬಹುಗ್ರಾಮ ಕುಡಿಯುವ ನೀರಿಗಾಗಿ ಸಂಗ್ರಹಿಸಿಟ್ಟಿದ್ದ ಪೈಪ್‍ ಕಳ್ಳತನ: ಆರೋಪಿ ಬಂಧನ.

ಸಾಹಿತಿಗಳು ಮತ್ತು ಚಿಂತಕರಿಗೆ ಬೆದರಿಕೆ ಪತ್ರಗಳನ್ನ ಬರೆದಿದ್ದ ಆರೋಪಿ ಅಂದರ್.