ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ತುಳಜಾಭವಾನಿ ದೇವಸ್ಥಾನದಲ್ಲಿ 84 ನೇ ವರ್ಷದ ಶ್ರೀ ಗಣೇಶೋತ್ಸವ.

ಶಿವಮೊಗ್ಗ: ನಗರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ವತಿಯಿಂದ ವಿಜೃಂಭಣೆಯ 84 ನೇ ವರ್ಷದ ಶ್ರೀ ಗಣೇಶೋತ್ಸವ ನಡೆಯುತ್ತಿದೆ.
ಈ ವರ್ಷದ ಶ್ರೀ ಕೃಷ್ಣನ ಬಾಲ ಲೀಲೆ – ಪೂತನಿಯ ವಿಮೋಚನೆ ವಿಶೇಷ ಅಲಂಕಾರ ಮಾಡಲಾಗಿದೆ. ಅ.8ರವರೆಗೆ ಒಟ್ಟು 21 ದಿನಗಳ ಕಾಲ ಸಂಜೆ 6.30 ರಿಂದ 9ರ ವರೆಗೆ ವಿಶೇಷ ಅಲಂಕಾರದ ಪ್ರದರ್ಶನವಿರುತ್ತದೆ ಎಂದು ಸಮಾಜದ ಅಧ್ಯಕ್ಷ ಗಜೇಂದ್ರನಾಥ ಮಾಳೋದೆ ತಿಳಿಸಿದ್ದಾರೆ.
ಕಳೆದ ಐದು ದಶಕಗಳಿಂದ ರಾಮಾಯಣ, ಮಹಾಭಾರತ, ಮತ್ತು ಪುರಾಣ ಕಥೆಗಳ ವಿಶೇಷ ಅಲಂಕಾರವನ್ನು ಗಣೇಶೋತ್ಸವದಲ್ಲಿ ನಡೆಸಿಕೊಂಡು ಬರುತ್ತಿರುವುದು ಇತಿಹಾಸ ಪ್ರಸಿದ್ದವಾಗಿದೆ. ಈ ಬಾರಿ ಶ್ರೀ ಕೃಷ್ಣನ ಬಾಲ ಲೀಲೆ – ಪೂತನಿಯ ವಿಮೋಚನೆ ವಿಶೇಷ ಅಲಂಕಾರ ಭಕ್ತರ ಕಣ್ಣನ ಸೆಳೆಯುತ್ತಿದೆ.
ಗಣೇಶೋತ್ಸವದ ಅಂಗವಾಗಿ ಸೆ. 26ರಂದು ಬೆಳಿಗ್ಗೆ 10.30 ಕ್ಕೆ ಮತ್ತು ಪ್ರಸಾದ ವಿನಿಯೋಗ. ಅ.7ರ ಸಂಜೆ 6:30ಕ್ಕೆ ಶ್ರೀ ಸ್ವಾಮಿಗೆ ಮಹಾಮಂಗಳಾರತಿ ಹಾಗೂ ಅ. 8ರಂದು ಸಂಜೆ 5 ಗಂಟೆಗೆ ಶ್ರೀ ವಿನಾಯಕ ಸ್ವಾಮಿಯ ರಾಜಬೀದಿ ಉತ್ಸವ ಹಮ್ಮಿಕೊಳ್ಳಲಾಗಿದೆ.
ಡೊಳ್ಳು ಕುಣಿತ ಚಿಣ್ಣರ ವಿವಿಧ ವೇಷಭೂಷಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತವಾದ ಮಂಟಪದಲ್ಲಿ ಮಂಗಳವಾದ್ಯದೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಗೋ.ವಾ. ಮೋಹನಕೃಷ್ಣ ಕೋರಿದ್ದಾರೆ.

Related posts

ಶುದ್ಧ ಹಸ್ತದ ಆಡಳಿತದಿಂದ ಬ್ಯಾಂಕಿನ ಏಳಿಗೆ ಸಾಧ್ಯ. ಬಿ ವೈ ರಾಘವೇಂದ್ರ

ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ: ಕಾವೇರಿ ನದಿ ಮೂಲಕ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ.

ವಕೀಲರೊಬ್ಬರ ಮೇಲೆ ಗಂಭೀರ ಸ್ವರೂಪದ  ಹಲ್ಲೆ ಆರೋಪ: ಮೂವರು ಪೊಲೀಸ್ ಸಿಬ್ಬಂದಿಗಳು ಅಮಾನತು.