ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ದೇಶದ ಜನತೆಗೆ ಶಾಕ್: ಡಾರ್ಕ್ ವೆಬ್ ನಲ್ಲಿ 81.5 ಕೋಟಿ ‘ಆಧಾರ್ ಕಾರ್ಡ್’ ಬಳಕೆದಾರರ ಡೇಟಾ ಸೋರಿಕೆ.

ನವದೆಹಲಿ : ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಬಳಿ ಇದ್ದ ಸುಮಾರು 81.5 ಕೋಟಿ ಭಾರತೀಯ ನಾಗರಿಕರ Covid-19 ಪರೀಕ್ಷಾ ಮಾಹಿತಿ ಮಾರಾಟವಾಗಿದೆ ಎಂಬ ರಹಸ್ಯ ಬಹಿರಂಗವಾಗಿದೆ. ಇದುವರೆಗೆ ಭಾರತದಲ್ಲಿ ನಡೆದಿರಬಹುದಾದ ಡೇಟಾ ಸೋರಿಕೆ ಅವ್ಯವಹಾರಗಳಲ್ಲೇ ಅತಿ ದೊಡ್ಡದು ಎಂದು ಈ ಪ್ರಕರಣವನ್ನು ಶಂಕಿಸಲಾಗಿದೆ.

Xನಲ್ಲಿ ಹ್ಯಾಂಡಲ್ ಹೊಂದಿರುವ ಸೈಬರ್ ದುಷ್ಕರ್ಮಿಯೊಬ್ಬ ಡಾರ್ಕ್ ವೆಬ್ನಲ್ಲಿ ಈ ಡೇಟಾ ಉಲ್ಲಂಘನೆಯ ಮಾಹಿತಿಯನ್ನು ಪ್ರಕಟಿಸಿದ್ದಾನೆ.  ಯುಎಸ್ ಸೈಬರ್ ಸೆಕ್ಯುರಿಟಿ ಸಂಸ್ಥೆಯಾದ ರೀಸೆಕ್ಯುರಿಟಿ ಅಕ್ಟೋಬರ್ ಆರಂಭದಲ್ಲಿ ಬ್ಲಾಗ್ ಪ್ರಕಟಿಸಿದ್ದು, ಭಾರತೀಯರ ವೈಯಕ್ತಿಕ ಡೇಟಾವನ್ನ ಡಾರ್ಕ್ ವೆಬ್ ಮೂಲಕ ಮಾರಾಟ ಮಾಡುವ ಸಾಮಾನ್ಯ ಪ್ರವೃತ್ತಿಯನ್ನ ಸೂಚಿಸುತ್ತದೆ. ಬೆದರಿಕೆಯ ನಟನೊಬ್ಬ 815 ಮಿಲಿಯನ್ ಆಧಾರ್ ದಾಖಲೆಗಳನ್ನ 80,000 ಡಾಲರ್’ಗೆ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದಾನೆ ಎಂದು ಸಂಸ್ಥೆ ಕಂಡುಕೊಂಡಿದೆ.

ಇದು ದೇಶ ಕಂಡ ಅತೀ ದೊಡ್ಡ ಡೇಟಾ ಸೋರಿಕೆ. ಕೋವಿಡ್ ವೇಳೆ ಆರ್ಟಿಪಿಆರ್ ಟೆಸ್ಟ್, ರ್ಯಾಪಿಡ್ ಟೆಸ್ಟ್ಗಳು , ಎಲ್ಲೇ ಹೋಗಲು ನೆಗಟೀವ್ ರಿಪೋರ್ಟ್ ಕಡ್ಡಾಯವಾಗಿತ್ತು. ಈ ವೇಳೆ ಭಾರತೀಯರು ಕೈಲ ವೈಯುಕ್ತಿಕ ಮಾಹಿತಿಯನ್ನು ICMRಗೆ  ನೀಡಬೇಕಿತ್ತು. ಹೀಗೆ 81.5 ಕೋಟಿ ಭಾರತೀಯರು ತಮ್ಮ ಹೆಸರು, ಆಧಾರ್ ನಂಬರ್, ಪಾಸ್ಪೋರ್ಟ್, ಫೋನ್ ನಂಬರ್ ಸೇರಿದಂತೆ ವೈಯುಕ್ತಿಕ ಮಾಹಿತಿ ನೀಡಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR)ಗೆ ಈ ಮಾಹಿತಿಗಳನ್ನು ನೀಡಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಬರೋಬ್ಬರಿ 81.5 ಕೋಟಿ ಮಂದಿ ಭಾರತೀಯರು ವೈಯುಕ್ತಿ ಮಾಹಿತಿ ಸೋರಿಕೆಯಾಗಿದೆ.

81.5 ಕೋಟಿ ಭಾರತೀಯರು ಮಹತ್ವದ ದಾಖಲೆಗಳು, ವೈಯುಕ್ತಿಕ ಮಾಹಿತಿಗಳು ಒಳಗೊಂಡ ಡೇಟಾ ಸೋರಿಕೆಯನ್ನು ಅಮೆರಿಕದ ಸೈಬರ್ ಸೆಕ್ಯೂರಿಟಿ ಮತ್ತು ಗುಪ್ತಚರ ಸಂಸ್ಥೆ ಗಮನಿಸಿ ಎಚ್ಚರಿಸಿದೆ. ಅಕ್ಟೋಬರ್ 9 ರಂದು ಅಮೆರಿಕ ಸಂಸ್ಥೆ ಈ ಕುರಿತು ಎಚ್ಚರಿಕೆ ನೀಡಿದೆ. ಡಾರ್ಕ್ವೆಬ್ ಮೂಲಕ ಭಾರತೀಯರ ಡೇಟಾವನ್ನು ಮಾರಾಟಕ್ಕಿಟ್ಟಿರುವ ಮಾಹಿತಿಯನ್ನು ಅಮೆರಿಕ ಪತ್ತೆ ಹಚ್ಚಿದೆ.

ICMRನಲ್ಲಿ ಭದ್ರವಾಗಿದ್ದ ಭಾರತೀಯರ ದಾಖಲೆಗಳು ಸೋರಿಕೆಯಾಗಿರುವುದು ಭಾರಿ ಸಂಚಲನ ಸೃಷ್ಟಿಸಿದೆ. ಸೋರಿಕೆಯಾಗಿರುವ ಡೇಟಾಗಳು ಐಸಿಎಂಆರ್ನಲ್ಲಿರುವ ದಾಖಲೆಗಳಿಗೆ ಹೋಲಿಕೆಯಾಗುತ್ತಿದೆ. ಈ ಸೋರಿಕೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಎಜೆನ್ಸಿ ಹಾಗೂ ಸಚಿವಾಲಯದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ICMR ಸರ್ಕಾರವನ್ನು ಸಂಪರ್ಕಿಸಿ ಮಾಹಿತಿ ನೀಡಿದೆ. ಇದೀಗ ದೂರು ನೀಡಲು ಸಜ್ಜಾಗಿದೆ. ಸೋರಿಕೆ ಕುರಿತು ತನಿಖೆ ನಡೆಸಲು ಸಿಬಿಐ ಮುಂದಾಗಿದೆ. ಸೋರಿಕೆಯಲ್ಲಿ ವಿದೇಶಿ ನಟರು ಭಾಗಿಯಾಗಿರುವ ಅನುವಾನ ದೃಢವಾಗುತ್ತಿದೆ. ಸದ್ಯ ಸೋರಿಕೆ ತಡೆಯಲು ಸಚಿವಾಲಯ ಎಸ್ಒಪಿ ನಿಯೋಜಿಸಿದೆ. ಆದರೆ ಸೋರಿಕೆ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.

 

Related posts

ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡರ ನಿಧನಕ್ಕೆ ಸಂಸದ ಬಿ.ವೈ. ರಾಘವೇಂದ್ರ ಸಂತಾಪ.

ಬಿಜೆಪಿ ಅವಧಿಯ 40% ಕಮಿಷನ್ ಬಗ್ಗೆ ತನಿಖೆಯಾಗದೆ ಬಿಲ್ ಪಾವತಿ ಸಾಧ್ಯವಿಲ್ಲ- ಮುಖ್ಯಮಂತ್ರಿ ಸಿದ‍್ಧರಾಮಯ್ಯ.

ಮೋದಿ ವಿರುದ್ಧ ಸ್ಪರ್ಧಿಸಿದರೆ ಪ್ರಿಯಾಂಕಾ ಗಾಂಧಿಗೆ ಗೆಲುವು ಖಚಿತ : ಶಿವಸೇನೆ ಮುಖಂಡ ಸಂಜಯ್ ರಾವತ್