ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

7ನೇ ವೇತನ ಆಯೋಗ: ಮೇಲ್ದರ್ಜೆಯ ವೇತನ ಹುದ್ದೆ ಉನ್ನತೀಕರಣಕ್ಕೆ ಬೇಡಿಕೆ.

ಬೆಂಗಳೂರು: ಸುಧಾಕರ್ ರಾವ್ ಅಧ್ಯಕ್ಷತೆಯ ರಾಜ್ಯ 7ನೇ ವೇತನ ಆಯೋಗ ರಚನೆ ಮಾಡಲಾಗಿದ್ದು, ನವೆಂಬರ್ ತಿಂಗಳಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ. ಈ ವಿಚಾರ ಸಂಬಂಧ ಮೇಲ್ದರ್ಜೆಯ ವೇತನ ಹುದ್ದೆ ಉನ್ನತೀಕರಣಕ್ಕೆ ಆಯೋಗದ ಮುಂದೆ ಬೇಡಿಕೆ ಇಡಲಾಗಿದೆ

ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ರಾಜ್ಯ 7ನೇ ವೇತನ ಆಯೋಗಕ್ಕೆ ವರದಿಯೊಂದನ್ನು ಸಲ್ಲಿಕೆ ಮಾಡಿದ್ದು, ಸಹಾಯಕರು  ಹಾಗೂ ಶೀಘ್ರಲಿಪಿಗಾರರು ಸೇರಿದಂತೆ ವಿವಿಧ ವೃಂದಗಳ ಬೇಡಿಕೆಗಳ ಕುರಿತು ಆಯೋಗಕ್ಕೆ ಮನವಿಯನ್ನು ಸಲ್ಲಿಕೆ ಮಾಡಿದೆ.

ಸಹಾಯಕರು ಹಾಗೂ ಶೀಘ್ರಲಿಪಿಗಾರರು ವರದಿಯಲ್ಲಿ ಕೇಂದ್ರ ಸಚಿವಾಲಯದಲ್ಲಿ ವಿಷಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ವೃಂದವು ಗ್ರೂಪ್-ಬಿ ಪತ್ರಾಂಕೇತರ (Non Gazetted) ಹುದ್ದೆಯಾಗಿರುತ್ತದೆ. ವೇತನ ಶ್ರೇಣಿಯು ರೂ. 44,900-1,42,400 ನೀಡಲಾಗುತ್ತಿದೆ.

ಆದರೆ ರಾಜ್ಯ ಸಚಿವಾಲಯದಲ್ಲಿ ಅದೇ ಸಮಾನಾಂತರ ವಿಷಯಗಳ ಕಾರ್ಯ ನಿರ್ವಹಣೆ ಮಾಡುತ್ತಿರುವ ಸಹಾಯಕ ಹುದ್ದೆಯು ಒಂದು ಕಿರಿಯ ಗ್ರೂಪ್ -ಸಿ ಹುದ್ದೆಯಾಗಿದ್ದು, ಇದನ್ನು ಕನಿಷ್ಠ ಹಿರಿಯ ಗ್ರೂಪ್-ಸಿ ಹುದ್ದೆಗೆ ಉನ್ನತೀಕರಿಸಿ, ಮೇಲ್ದರ್ಜೆಯ ವೇತನ ಶ್ರೇಣಿಗೆ ನಿಗದಿಪಡಿಸುವುದು ಅತ್ಯವಶ್ಯಕವಾಗಿರುತ್ತದೆ. (ವೇತನ ಪ್ರಸ್ತುತ ರೂ. 30,350-58,250 ರಿಂದ ರೂ. 37,900-70,850ಕ್ಕೆ ಹೆಚ್ಚಿಸುವುದು) ಎಂದು ಮನವಿ ಮಾಡಲಾಗಿದೆ.

ಶೀಘ್ರಲಿಪಿಗಾರರ ವೃಂದವು ಸಹಾಯಕ ವೃಂದಕ್ಕೆ ತತ್ಸಮಾನ ಹುದ್ದೆಯಾಗಿದ್ದು, ಕೇಂದ್ರ ಸಚಿವಾಲಯದಲ್ಲಿ ಶೀಘ್ರಲಿಪಿಗಾರರನ್ನೇ ಆಪ್ತ ಸಹಾಯಕರಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಸದರಿ ನೌಕರರಿಗೆ ವೇತನ ಶ್ರೇಣಿಯು ರೂ. 44,900-142,400 ನೀಡಲಾಗುತ್ತಿದೆ. ಪ್ರಯುಕ್ತ ರಾಜ್ಯ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೀಘ್ರಲಿಪಿಗಾರರಿಗೂ ಸಹ ಕನಿಷ್ಠ ವೇತನ ಶ್ರೇಣಿ ಪ್ರಸ್ತುತ ರೂ. 30,350-58,250 ರಿಂದ ರೂ. 37,900-70,850ಕ್ಕೆ ಹೆಚ್ಚಿಸುವಂತೆ ವರದಿಯಲ್ಲಿ ವೇತನ ಆಯೋಗಕ್ಕೆ ಕೋರಲಾಗಿದೆ.

ಕರ್ನಾಟಕದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿತ್ತು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಯೋಗ ವರದಿ ನೀಡಲು ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023ರಿಂದ 6 ತಿಂಗಳು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿತ್ತು. 7ನೇ ವೇತನ ಆಯೋಗದ ಅಧ್ಯಕ್ಷರು, ಸದಸ್ಯರ ನಿಯೋಗ ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿತ್ತು.

 

Related posts

70ನೇ ವರ್ಷದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ: ಅಂಜುಮನ್ ಸಂಸ್ಥೆ ಅರ್ಜಿ ವಜಾ

ಮೂರ್ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧ- ಡಿಸಿಎಂ ಡಿ.ಕೆ ಶಿವಕುಮಾರ್.