ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಹೆಂಡತಿ- ಮಕ್ಕಳ ಮುಂದೆಯೇ ಎಂಎಲ್ ಸಿ 3ನೇ ಮದುವೆ : ಸಾಕ್ಷಿಯಾಗಿ ಸಹಿ ಹಾಕಿದ ಸಾಥ್ ನೀಡಿದ 2ನೇ ಪತ್ನಿ.

ಆಂಧ್ರಪ್ರದೇಶ: ವಿಧಾನ ಪರಿಷತ್ ಸದಸ್ಯರೊಬ್ಬರು ತನ್ನ ಹೆಂಡತಿ- ಮಕ್ಕಳ ಮುಂದೆಯೇ 3ನೇ ಮದುವೆ ಯಾಗಿದ್ದು, ಸಾಕ್ಷಿಯಾಗಿ 2ನೇ ಪತ್ನಿ ಸಹಿ ಹಾಕಿದ ಸಾಥ್ ನೀಡಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ವೈಎಸ್ಆರ್ಸಿಪಿ ಎಂಎಲ್ಸಿ ಜಯಮಂಗಲ ವೆಂಕಟರಮಣ ಮೂರನೇ ಬಾರಿಗೆ ವಿವಾಹವಾಗಿದ್ದಾರೆ. ಎರಡನೇ ಮದುವೆ, 3ನೇ ಮದುವೆ ಹೊಸ ವಿಷಯವಲ್ಲ, ಸುದ್ದಿಯೂ ಅಲ್ಲ. ಆದರೆ ಈ ಮದುವೆಯ ವಿಶೇಷವೆಂದರೆ ಅವರ ಈ 3ನೇ ಮದುವೆಗೆ 2ನೇ ಪತ್ನಿ ಸಾಕ್ಷಿಯಾಗಿ ಸಹಿ ಮಾಡಿದ್ದಾರೆ.

ವೆಂಕಟರಮಟ ಕೈಕಲೂರು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಅರಣ್ಯ ಇಲಾಖೆಯಲ್ಲಿ ಸೆಕ್ಷನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಜಾತಾ ಎಂಬುವವರನ್ನ 2ನೇ ಪತ್ನಿಸಮ್ಮುಖದಲ್ಲೇ ವಿವಾಹವಾದರು.

ವೆಂಕಟರಮಣಗೆ 3ನೇ, ಸುಜಾತಗೆ 2ನೇ ವಿವಾಹ

ಎಂಎಲ್ ಸಿ ಜಯಮಂಗಲ ವೆಂಕಟರಮಣ ಅವರಿಗೆ ಇದು ಮೂರನೇ ವಿವಾಹ. ಈ ಮೂರನೇ ಮದುವೆಗೆ ಎರಡನೇ ಪತ್ನಿ ಸಾಕ್ಷಿ ಸಹಿ ಹಾಕಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಮತ್ತೊಂದು ವಿಶೇಷವೆಂದರೆ ಪತ್ನಿ ಮತ್ತು ಮಗನ ಸಮ್ಮುಖದಲ್ಲಿ ಮೂರನೇ ಮದುವೆ ನಡೆದಿದೆ. ವೆಂಕಟರಮಣ ಮೊದಲ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅಷ್ಟೊತ್ತಿಗಾಗಲೇ ಆಕೆಗೆ ಮಗಳಿದ್ದಳು. ನಂತರ ವೆಂಕಟ ರಮಣ ಎರಡನೇ ಮದುವೆಯಾದರು. ಅವರ ಎರಡನೇ ಮದುವೆಯಿಂದ ಅವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ಈಗ ಮೂರನೇ ಮದುವೆಯಾಗಿದ್ದಾರೆ.

ಮೂರನೇ ಮದುವೆಯಾಗಿರುವ ಸುಜಾತಾ ಏಲೂರು ವ್ಯಾಪ್ತಿಯ ಅರಣ್ಯ ಇಲಾಖೆಯಲ್ಲಿ ಸೆಕ್ಷನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಅವರಿಗೆ 2ನೇ ಮದುಯಾಗಿದ್ದು, ಅವರಿಗೂ ಒಬ್ಬ ಮಗನಿದ್ದಾನೆ. ವೆಂಕಟರಮಣನ ಅವರ ಮೊದಲ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದರು. ನಂತರ ಅವರು 2ನೇ ವಿವಾಹವಾಗಿದ್ದರು. ಅವರಿಗೆ ಒಂದು ಗಂಡು ಮತ್ತು ಹೆಣ್ಣು ಮಗಳಿದ್ದಾರೆ. ಸಂಸಾರದಲ್ಲಿ ಕಲಹದ ಕಾರಣ ಕೆಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದರು. ಅಂದಿನಿಂದ ಒಂಟಿಯಾಗಿದ್ದ ವೆಂಕಟರಮಣ ಮೂರನೇ ಮದುವೆಯಿಂದ ಹೊಸ ಜೀವನ ಆರಂಭಿಸಿದ್ದಾರೆ. ಇದಕ್ಕೆ 2ನೇ ಪತ್ನಿ ಕೂಡ ಸಾಥ್ ನೀಡಿದ್ದಾರೆ.

ಜಯಮಂಗಲ ವೆಂಕಟರಮಣ ಹಲವು ವರ್ಷಗಳ ಕಾಲ ಟಿಡಿಪಿಯಲ್ಲಿದ್ದರು. ಅವರು ಕೈಕಲೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರು. 1999 ರಲ್ಲಿ ತೆಲುಗು ದೇಶಂ ಮೂಲಕ ರಾಜಕೀಯ ಪ್ರವೇಶಿಸಿದರು. 2005ರಲ್ಲಿ ಕೈಕಳೂರು ZPTC ಸದಸ್ಯರಾಗಿ ಆಯ್ಕೆಯಾಗಿದ್ದರು. 2009ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೈಕಲೂರು ಕ್ಷೇತ್ರದಿಂದ ಟಿಡಿಪಿ ಪರವಾಗಿ ಗೆದ್ದು ಪ್ರಥಮ ಬಾರಿಗೆ ಶಾಸಕರಾದರು. 2014ರ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿಯ ಭಾಗವಾಗಿ ಟಿಕೆಟ್ ಸಿಕ್ಕಿರಲಿಲ್ಲ. 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಪರವಾಗಿ ಸ್ಪರ್ಧಿಸಿ ಸೋತರು, ಬಳಿಕ ಟಿಡಿಪಿಗೆ ರಾಜೀನಾಮೆ ನೀಡಿ ವೈಸಿಪಿ ಸೇರಿದ್ದರು.ವೈಸಿಪಿ ಸೇರಿದ ಬೆನ್ನಲ್ಲೇ ಅವರಿಗೆ ಶಾಸಕರ ಕೋಟಾದಲ್ಲಿ ಎಂಎಲ್ಸಿ ಹುದ್ದೆ ನೀಡಲಾಗಿದೆ.

 

Related posts

ಸತ್ಯದ ಪ್ರತೀಕವಾಗಿ ರಂಗಭೂಮಿ ಉಳಿಯ ಬೇಕು: ಟಿ.ಎಸ್.ನಾಗಾಭರಣ ಅಭಿಮತ

ನಾಳೆ ಬೆಳಿಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ- ಜೆಡಿಎಸ್ ಮುಖಂಡ ಆಯನೂರು ಮಂಜುನಾಥ್

ಮಹಾತ್ಮಾ ಗಾಂಧಿ ಪ್ರತಿಮೆಗೆ ಹಾನಿ: ಪ್ರಕರಣ ದಾಖಲು.