ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರೋಟರಿ ವಲಯ ಮಟ್ಟದ ಕ್ರೀಡಾಕೂಟ ನ. 18, 19ಕ್ಕೆ

ಶಿವಮೊಗ್ಗ: ನವೆಂಬರ್ 18 ಮತ್ತು 19 ರಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಮುಂದಾಳತ್ವದಲ್ಲಿ ರೋಟರಿ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ರೋಟರಿ ವಲಯ 11ರ ಸಹಾಯಕ ಗವರ್ನರ್ ರವಿ ಕೋಟೋಜಿ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಸೇವಾ ಸಂಸ್ಥೆ ಆಗಿದ್ದು, ರೋಟರಿ ಸದಸ್ಯರಿಗೆ ಶಿವಮೊಗ್ಗ ನಗರದಲ್ಲಿ ವಲಯ ಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಲಯ ಮಟ್ಟದ ಕ್ರೀಡಾಕೂಟದ ಅಧ್ಯಕ್ಷ ಗಣೇಶ್ ಎಂ.ಅಂಗಡಿ ಮಾತನಾಡಿ, ನವೆಂಬರ್ 18 ರಂದು ನೆಹರು ಕ್ರೀಡಾಂಗಣದಲ್ಲಿ ಶೆಟಲ್ ಬ್ಯಾಡ್ಮಿಂಟನ್, ಚೆಸ್, ಕೇರಂ, ಟೇಬಲ್ ಟೆನ್ನಿಸ್ ನಡೆಯಲಿದೆ. ನವೆಂಬರ್ 19ರಂದು ಕೃಷಿ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ರಿಕೆಟ್ ವಾಲಿಬಾಲ್, ಥ್ರೋಬಾಲ್, ಟಗ್ ಆಫ್ ವಾರ್ ನಡೆಯಲಿದೆ. ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ರೋಟರಿ ಶಿವಮೊಗ್ಗ ಪೂರ್ವ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ಕ್ರೀಡಾಕೂಟದಲ್ಲಿ ಸದಸ್ಯರು ಒಟ್ಟುಗೂಡಿಸಲು ಸಹಕಾರಿಯಾಗುತ್ತದೆ. ವಿಜೇತರಾದವರು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿದೆ. ಕ್ರೀಡಾಕೂಟದಲ್ಲಿ 15ಕ್ಕಿಂತ ಹೆಚ್ಚಿನ ಕ್ಲಬ್‌ಗಳು 300ಕ್ಕೂ ಹೆಚ್ಚು ಸದಸ್ಯರು ಭಾಗವಹಿಸುವರು ಎಂದು ತಿಳಿಸಿದರು.

ವಲಯ 10ರ ಸಹಾಯಕ ಗವರ್ನರ್ ರಾಜೇಂದ್ರ ಪ್ರಸಾದ್, ವಲಯ ಸೇನಾನಿ ಧರ್ಮೇಂದ್ರ ಸಿಂಗ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಕಾರ್ಯದರ್ಶಿ ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

ಎಫ್‌ಕೆಸಿಸಿಐ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿ ಡಿ.ಎಂ.ಶಂಕರಪ್ಪ

ಭಾರತ- ಬಾಂಗ್ಲಾ ಯುದ್ಧದಲ್ಲಿ ಭಾಗಿಯಾಗಿದ್ದ ಟಿ55 ಯುದ್ಧ ಟ್ಯಾಂಕರ್ ನಾಳೆ ಶಿವಮೊಗ್ಗಕ್ಕೆ.

ಶ್ರೀ ಮರುಳ ಸಿದ್ಧ ಸ್ವಾಮೀಜಿ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ ಗಣ್ಯರು.