ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ರಾಜ್ಯಸಭೆಯಲ್ಲಿ ಶೇ 12 ರಷ್ಟು ಸದಸ್ಯರು ಕೋಟ್ಯಾಧಿಪತಿಗಳು.

ನವದೆಹಲಿ: ರಾಜ್ಯಸಭೆಯ ಶೇ.12ರಷ್ಟು ಸದಸ್ಯರು ಕೋಟ್ಯಧಿಪತಿಗಳು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿಯಲ್ಲಿ ತಿಳಿದು ಬಂದಿದೆ.

ಇವರ ಪೈಕಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸಂಸದರು ಹೆಚ್ಚು ಶ್ರೀಮಂತರು ಎಂದು ವರದಿಯಲ್ಲಿ ಬಹಿರಂಗವಾಗಿದೆ.  ಒಟ್ಟು 233 ಸಂಸದರ ಪೈಕಿ 225 ಮಂದಿ ಅಪರಾಧ ಹಿನ್ನೆಲೆಯುಳ್ಳವರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿಯಿದೆ, ವರದಿಯ ಪ್ರಕಾರ, ಆಂಧ್ರಪ್ರದೇಶದ 11 ಸಂಸದರಲ್ಲಿ 5 (ಶೇ. 45), ತೆಲಂಗಾಣದ 7 ಸಂಸದರಲ್ಲಿ 3 (ಶೇ. 43), ಮಹಾರಾಷ್ಟ್ರದ 19 ಸಂಸದರಲ್ಲಿ 3 (ಶೇ. 16), ದೆಹಲಿಯ 3 ಸಂಸದರಲ್ಲಿ 1 (ಶೇ. 33), ಪಂಜಾಬ್ನ 7 ಸಂಸದರಲ್ಲಿ 2 (ಶೇ.29), ಹರಿಯಾಣದ 5 ಸಂಸದರಲ್ಲಿ 1 (ಶೇ.20) ಮತ್ತು ಮಧ್ಯಪ್ರದೇಶದ 11 ಸಂಸದರ ಪೈಕಿ 2 (ಶೇ.18) 100 ಕೋಟಿ ರೂ.ಗೂ ಹೆಚ್ಚು ಆಸ್ತಿ ಘೋಷಿಸಿಕೊಂಡಿದ್ದಾರೆ.

ತೆಲಂಗಾಣದ 7 ಸಂಸದರ ಒಟ್ಟು ಆಸ್ತಿ 5,596 ಕೋಟಿ ರೂ., ಆಗಿದ್ದರೆ ಆಂಧ್ರಪ್ರದೇಶದ 11 ಸಂಸದರ ಆಸ್ತಿ 3,823 ಕೋಟಿ ರೂ. ಆಗಿದೆ. 225 ರಾಜ್ಯಸಭೆಯ ಹಾಲಿ ಸಂಸದರ ಪೈಕಿ 75 (ಶೇ. 33) ಮಂದಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಇವರಲ್ಲಿ 41 ಮಂದಿ ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಇವರಲ್ಲಿ ಬಿಜೆಪಿಯ 85, ಕಾಂಗ್ರೆಸ್ನ 30, ಎಐಟಿಸಿಯ 13, ಆರ್ಜೆಡಿಯಿಂದ 6, ಸಿಪಿಐ(ಎಂ)ನ 5, ಎಎಪಿಯ 10, ವೈಎಸ್ಆರ್ಸಿಪಿಯ 9 ಮತ್ತುಎನ್ಸಿಪಿಯ 3 ರಾಜ್ಯಸಭಾ ಸಂಸದರು ತಮ್ಮ ಅಫಿಡವಿಟ್ನಲ್ಲಿ ಕ್ರಿಮಿನಲ್ ಮೊಕದ್ದಮೆ ಘೋಷಿಸಿಕೊಂಡಿದ್ದಾರೆ.

 

Related posts

ಪ್ರತಿಯೊಬ್ಬರಲ್ಲಿಯೂ ಸ್ವಚ್ಛತಾ ಜಾಗೃತಿ ಅವಶ್ಯಕ-ಸಿ.ರಾಜು

ಅಡಿಕೆಹಾಳೆ ಉತ್ಪನ್ನಗಳಿಗೆ ಬಿಐಎಸ್ ಪ್ರಮಾಣೀಕರಣ ದೊರತರೆ ಮೌಲ್ಯ ಹೆಚ್ಚುತ್ತದೆ-ಗೋಪಿನಾಥ್

ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆ.