ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

11 ಶಾಸಕರು ನನ್ನ ಬಳಿ ಜೆಡಿಎಸ್-ಬಿಜೆಪಿ ಮೈತ್ರಿ ಬೇಡ ಎಂದಿದ್ದಾರೆ- ಹೊಸಬಾಂಬ್ ಸಿಡಿಸಿದ ಸಿಎಂ ಇಬ್ರಾಹಿಂ

ಬೆಂಗಳೂರು: ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಬೇಸರ ಹೊರ ಹಾಕಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ನಾನು ಒಂದು ರೀತಿ ವಿಷಕಂಠ ಇದ್ದ ಹಾಗೆ. ನಾನು ಈಗಲೂ ವಿಷ ಕುಡಿಯುತ್ತಲೇ ಇದ್ದೇನೆ ಎಂದಿದ್ದಾರೆ.

ಮೈತ್ರಿ ಕುರಿತು ಇಂದು ಮಾತನಾಡಿದ ಸಿಎಂ ಇಬ್ರಾಹಿಂ, ಜೆಡಿಎಸ್ ತೆಗೆದು ಹಾಕುವ ನಿಟ್ಟಿನಲ್ಲಿಯೇ ಬಿಜೆಪಿ ಪ್ರಚಾರ ಮಾಡಿತ್ತು. ಬಿಜೆಪಿ ದುರಾಡಳಿತದಿಂದ ಕಾಂಗ್ರೆಸ್ ಜಯವಾಗಿದೆ. ಪರಿಷತ್ ಸದಸ್ಯ ಸ್ಥಾನವನ್ನು ಬಿಟ್ಟು ಜೆಡಿಎಸ್ ಗೆ ಬಂದಿದ್ದೇನೆ. ಜೆಡಿಎಸ್ ಸೇರಲು ನಾನು ಹೆಚ್.ಡಿಕೆ ಮನೆಗೆ ಹೋಗಿರಲಿಲ್ಲ ಕುಮಾರಸ್ವಾಮಿ ನಮ್ಮ ಮನೆ ಬಳಿ ಬಂದಿದ್ದರು. ಕುಮಾರಸ್ವಾಮಿ ನನ್ನ ಬಳೀ ಯಾವ ವಿಚಾರ ಪ್ರಸ್ತಾಪ ಮಾಡಿಲ್ಲ. 11 ಶಾಸಕರು ನನ್ನ ಬಳಿ ಮೈತ್ರಿ ಬೇಡ ಎಂದಿದ್ದಾರೆ.  ಅದ್ರೆ ಶಾಸಕರ ಹೆಸರು ಪ್ರಸ್ತಾಪ ಮಾಡಲ್ಲ ಎಂದರು.

ದೇವೆಗೌಡರು, ಹೆಚ್.ಡಿ ಕುಮಾರಸ್ವಾಮಿ ಮೇಲೆ ನನಗೆ ಗೌರವವಿದೆ. ಅವರು ಏನು ಹೇಳುತ್ತಾರೆ. ನಾನು ಒಂದು ರೀತಿ ವಿಷಕಂಠ ಇದ್ದ ಹಾಗೆ.  ನಾನು ಈಗಲೂ ವಿಷ ಕುಡಿಯುತ್ತಲೇ ಇದ್ದೇನೆ.. 16ನೇ ತಾರೀಖು ಎಲ್ಲರೊಂದಿಗೆ ಮಾತನಾಡುತ್ತೇನೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಚರ್ಚೆ ಮಾಡುತ್ತೇನೆ ಎಂದರು.

Related posts

ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು

TOD News

ರಾಜ್ಯ ಸರ್ಕಾರ ಪಠ್ಯಪುಸ್ತಕ ಬದಲಾಣೆ ಮಾಡಿರುವುದು ದ್ವೇಷದ ರಾಜಕಾರಣ-ಪರಿಷತ್ ಸದಸ್ಯ ಡಿ.ಎಸ್. ಅರುಣ್

ತುಂಗಾ ನದಿ ಮಲೀನವಾಗುತ್ತಿದ್ದರೂ ಪಾಲಿಕೆ ಅತ್ಯಂತ ದಿವ್ಯ ನಿರ್ಲಕ್ಷ್ಯ- ಎಎಪಿ ಆರೋಪ.