ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ದೇಶದಲ್ಲಿ 1.59 ಲಕ್ಷಕೋಟಿ ಜಿಎಸ್ ಟಿ ಸಂಗ್ರಹ: ಕರ್ನಾಟಕದ ಪಾಲು ಎಷ್ಟು ಗೊತ್ತೆ..?

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಮಹರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೇ  ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ 2023ರ ಆಗಸ್ಟ್ ನಲ್ಲಿ 1,59,069 ಕೋಟಿ ರೂ. ಜಿಎಸ್ ಟಿ ಸಂಗ್ರಹಿಸಲಾಗಿದೆ.

ಇದು ವರ್ಷಕ್ಕೆ ಪರಿಗಣಿಸುವಾಗ ಶೇ.11 ಬೆಳವಣಿಗೆ ಕಾಣಿಸಿದೆ.  ಇದೇ ವೇಳೆ ಕರ್ನಾಟಕ ಆಗಸ್ಟ್ನಲ್ಲಿ 11,116 ಕೋಟಿ ರೂ. ಜಿಎಸ್ಟಿ ಸಂಗ್ರಹಿಸಿದೆ. ಮಹಾರಾಷ್ಟ್ರ ಆರಂಭದಿಂದಲೂ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ನಂತರ ಸ್ಥಾನದಲ್ಲಿ ಕರ್ನಾಟಕವಿದೆ. ಈ ಮುನ್ನ ಗುಜರಾತ್ ಎರಡನೇ ಸ್ಥಾನದಲ್ಲಿತ್ತು. ಜುಲೈ ತಿಂಗಳಿನಲ್ಲಿ ದೇಶದ ಒಟ್ಟು ಜಿಎಸ್ ಟಿ ಸಂಗ್ರಹ 1,23,026 ಕೋಟಿ ರೂ. ಆಗಿದ್ದು, 2022ರ ಜುಲೈ ತಿಂಗಳಿಗೆ ಹೋಲಿಸಿದರೆ 16 ಸಾವಿರ ಕೋಟಿ ರೂ. ಹೆಚ್ಚಾಗಿತ್ತು.

2023ರ ಜುಲೈನಲ್ಲಿ ಕರ್ನಾಟಕದ ಜಿಎಸ್ಟಿ ಸಂಗ್ರಹ 11,505 ಕೋಟಿ ರೂ.ಗಳಾಗಿದ್ದರೆ, ಮಹಾರಾಷ್ಟ್ರದ್ದು 26,064 ಕೋಟಿ ರೂ.ಗಳಾಗಿತ್ತು. 2023ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ಜಿಎಸ್ಟಿ ಸಂಗ್ರಹ ಗಮನಿಸುವುದಾದರೆ ಮಾರ್ಚ್ನಲ್ಲಿ ಏಪ್ರಿಲ್ನಲ್ಲಿ 14,593 ಕೋಟಿ ರೂ., ಮೇನಲ್ಲಿ 10,317 ಕೋಟಿ ರೂ., ಜೂನ್ನಲ್ಲಿ 11,193 ಕೋಟಿ ರೂ., ಜುಲೈನಲ್ಲಿ 11,505 ಕೋಟಿ ರೂ. ಸೇರಿ ನಾಲ್ಕು ತಿಂಗಳಲ್ಲಿ 47,608 ಕೋಟಿ ರೂ. ಸಂಗ್ರಹವಾಗಿತ್ತು. ಆಗಸ್ಟ್ನಲ್ಲಿ 11,116 ಕೋಟಿ ಸಂಗ್ರಹವಾಗುವ ಮೂಲಕ ಅರ್ಧ ಶತಕದ ಗಡಿ ದಾಟಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹ 11% ರಷ್ಟು ಏರಿಕೆಯಾಗಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ1,43,612 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಈ ವರ್ಷದ ಜುಲೈನಲ್ಲಿ 1,65,105 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು.

ಒಟ್ಟು ಜಿಎಸ್ಟಿ ಸಂಗ್ರಹದಲ್ಲಿ ಕೇಂದ್ರ ಜಿಎಸ್ಟಿ (CGST) ಪಾಲು 28,328 ಕೋಟಿ ರೂ. ಆಗಿದ್ದರೆ ರಾಜ್ಯ ಜಿಎಸ್ಟಿ (SGST) 35,794 ಕೋಟಿ ರೂ. ಆಗಿದೆ. ಇಂಟಿಗ್ರೇಟೆಡ್ ಜಿಎಸ್ಟಿ (ಭಾರತಕ್ಕೆ ಆಮದು ಮಾಡಿಕೊಳ್ಳುವ ಮತ್ತು ಭಾರತದಿಂದ ರಫ್ತು ಮಾಡುವ ಸಂದರ್ಭಗಳಲ್ಲಿ ಸರಕು ಮೇಲೆ ಹಾಕುವ ತೆರಿಗೆ) 83,251 ಕೋಟಿ ರೂ.ಗಳಾಗಿವೆ. ಇದರಲ್ಲಿ 11,695 ಕೋಟಿ ರೂ.(ವಸ್ತುಗಳನ್ನು ಆಮದು ಮಾಡಿಕೊಂಡಿದ್ದಕ್ಕೆ 1,016 ಕೋಟಿ ರೂ. ಸಂಗ್ರಹ ಸೇರಿ) ಸೆಸ್ ಕೂಡ ಸೇರಿದೆ.

 

Related posts

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇಮಕ ಸಾಧ್ಯತೆ…

ರಾಜ್ಯವನ್ನು ಸಂಪೂರ್ಣ ಬರಗಾಲವೆಂದು ಘೋಷಿಸಿ: ರೈತ ಮುಖಂಡರಿಂದ ಧರಣಿ.

ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ.